ಬಾಲಿವುಡ್ ಹಾಟ್ ನಟಿ ವಿದ್ಯಾಬಾಲನ್ ಎದುರಿಗೆ ಹಸ್ತಮೈಥುನ ಮಾಡಿದ ಯುವಕ

ಗುರುವಾರ, 5 ಅಕ್ಟೋಬರ್ 2017 (19:18 IST)
ಬಾಲಿವುಡ್‌ನ ಹಾಟ್ ನಟಿ ವಿದ್ಯಾಬಾಲನ್ ತಮ್ಮ ಮುಂದೆ ನಡೆದ ಆಘಾತಕಾರಿ ಘಟನೆಯನ್ನು ಹಂಚಿಕೊಂಡಿದ್ದಾರೆ. ಒಮ್ಮೆ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಯುವಕನೊಬ್ಬ ತಮ್ಮ ಮುಂದೆಯೇ ಹಸ್ತಮೈಥುನ ಮಾಡಿಕೊಂಡಿದ್ದ ಎಂದು ತಿಳಿಸಿದ್ದಾರೆ.   
ವಿದ್ಯಾಬಾಲನ್ ಅಂದು ನಡೆದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಇಂತಹ ಘಟನೆಗಳು ಆತಂಕ ಮೂಡಿಸುತ್ತವೆ ಎಂದು ಹೇಳಿದ್ದಾರೆ.
 
ವಿದ್ಯಾಬಾಲನ್ ಕಾಲೇಜಿನಿಂದ ಮನೆಗೆ ಮರಳಲು ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಮಹಿಳಾ ಕಂಪಾರ್ಟ್‌ಮೆಂಟ್‌ಗೆ ಯುವಕನೊಬ್ಬ ನುಗ್ಗಿದ್ದಾನೆ. ಅಲ್ಲಿದ್ದ ಮಹಿಳೆಯರು ಯುವಕನಿಗೆ ಪುರುಷರ ಬೋಗಿಗೆ ತೆರಳುವಂತೆ ಸೂಚಿನೆ ನೀಡಿದ್ದರೂ ಮಹಿಳೆಯ ಮಾತುಗಳಿಗೆ ಯುವಕ ಕ್ಯಾರೆ ಎನ್ನಲಿಲ್ಲ ಎಂದು ತಿಳಿಸಿದ್ದಾರೆ.
 
ಇದು ಮಹಿಳೆಯರ ಬೋಗಿಯಾಗಿದೆ ಎಂದು ಹೇಳಿದ ನಂತರ ಯುವಕ, ನನಗೆ ಮಹಿಳೆಯರ ಬೋಗಿ ಎಂದು ಗೊತ್ತಿಲ್ಲ ಮುಂದಿನ ನಿಲ್ದಾಣದಲ್ಲಿ ಇಳಿಯುವುದಾಗಿ ತಿಳಿಸಿದ್ದಾನೆ. ಆದರೆ, ಮುಂದಿನ ರೈಲು ನಿಲ್ದಾಣದಲ್ಲಿ ಇಳಿಯುವ ಬದಲಿಗೆ ರೈಲಿನ ಬಾಗಿಲಿನಲ್ಲಿ ನಿಂತು ನಮ್ಮ ಎದುರಿಗೆ ಪ್ಯಾಂಟ್‌ ಜಿಪ್ ತೆಗೆದು ಹಸ್ತಮೈಥುನ ಮಾಡಲು ಆರಂಭಿಸಿದ. ಇದು ನನಗೆ ತುಂಬಾ ಭಯವಾಯಿತು. ನನ್ನ ಕೈಯಲ್ಲಿದ್ದ ಫೈಲ್‌ನಿಂದ ಆತನ ಮೇಲೆ ಹಲ್ಲೆ ಮಾಡಿ ಹೊರ ಹಾಕಿದೆ ಎಂದು ತಿಳಿಸಿದ್ದಾರೆ. 
 
ಪ್ರಸಕ್ತ ವರ್ಷದ ಮಾರ್ಚ್ ತಿಂಗಳಲ್ಲಿ ಕೋಲ್ಕತಾ ನಗರಕ್ಕೆ ಬೇಗಂ ಜಾನ್ ಚಿತ್ರದ ಪ್ರಮೋಷನ್‌ಗಾಗಿ ತೆರಳಿದ್ದಾಗ ಯುವಕನೊಬ್ಬ ವಿಮಾನ ನಿಲ್ದಾಣದಲ್ಲಿ ದುರ್ವರ್ತನೆ ತೋರಿದ್ದ  ಎಂದು ಬಾಲಿವುಡ್ ಹಾಟ್ ನಟಿ ವಿದ್ಯಾಬಾಲನ್ ತಮ್ಮ ಅನುಭವ ಹೇಳಿಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ