ನಟ ವಿಜಯ್ ವಿರುದ್ಧ ಪುತ್ರಿ ಮೋನಿಷಾಳಿಂದ ಮಹಿಳಾ ಆಯೋಗಕ್ಕೆ ದೂರು
ಗುರುವಾರ, 1 ನವೆಂಬರ್ 2018 (07:11 IST)
ಬೆಂಗಳೂರು : ನಟ ದುನಿಯಾ ವಿಜಯ್ ವಿರುದ್ಧ ಅವರ ಪುತ್ರಿ ಮೋನಿಷಾ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ.
ತಂದೆ ದುನಿಯಾ ವಿಜಯ್ ಹಾಗೂ ತಾಯಿ ನಾಗರತ್ನ ಅವರ ನಡುವೆ ಕಿತ್ತಾಟ ನಡೆಯುತ್ತಿರುವ ಹಿನ್ನಲೆಯಲ್ಲಿ ಬೇಸರಗೊಂಡ ಮೋನಿಷಾ ಅಪ್ಪ-ಅಮ್ಮನ ಗಲಾಟೆಯಲ್ಲಿ ನಮಗೆ ತೊಂದರೆಯಾಗುತ್ತಿದೆ. ಆರ್ಥಿಕವಾಗಿಯೂ ಅಪ್ಪನಿಂದ ಸಹಾಯ ಸಿಗುತ್ತಿಲ್ಲ. ಹೀಗಾಗಿ ಕೂಡಲೇ ಆಯೋಗ ಮಧ್ಯಪ್ರವೇಶ ಮಾಡಿ ಇದನ್ನು ಬಗೆಹರಿಸಬೇಕು ಎಂದು ಮಹಿಳಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾಳೆ.
ವಿಜಯ್ ಅವರ ಕುಟುಂಬದ ವೈಮನಸ್ಸಿನಿಂದ ಮಕ್ಕಳ ಬದುಕು ಹಾಳಾಗುವುದು ಬೇಡ ಎನ್ನುವ ಕಾರಣಕ್ಕೆ ಮೋನಿಷಾ ಲಿಖಿತ ದೂರಿನನ್ವಯ ವಿಜಯ್ ಗೆ ನೋಟಿಸ್ ನೀಡುವುದರ ಮೂಲಕ ಮಕ್ಕಳ ವಿದ್ಯಾಭ್ಯಾಸದ ಖರ್ಚು ವೆಚ್ಚ, ಮಕ್ಕಳಿಗೆ ಆರ್ಥಿಕ ನೆರವಿನ ಬಗ್ಗೆ ಆಯೋಗ ಒಂದಿಷ್ಟು ಷರತ್ತು ವಿಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.