ಖುಷಿ ಬ್ಲಾಕ್ ಬ್ಲಸ್ಟರ್ ಆದ ಬೆನ್ನಲ್ಲೇ ವಿಜಯ್ ದೇವರಕೊಂಡ ಟೆಂಪಲ್ ರನ್

ಭಾನುವಾರ, 3 ಸೆಪ್ಟಂಬರ್ 2023 (17:53 IST)
ಹೈದರಾಬಾದ್: ವಿಜಯ್ ದೇವರಕೊಂಡ-ಸಮಂತಾ ಋತು ಪ್ರಭು ಪ್ರಮುಖ ಪಾತ್ರದಲ್ಲಿ ನಟಿಸಿರುವ ಖುಷಿ ಸಿನಿಮಾ ಬಿಡುಗಡೆಯಾಗಿ ಎರಡನೇ ದಿನವೂ ಉತ್ತಮ ಕಲೆಕ್ಷನ್ ಮಾಡುತ್ತಿದೆ.

ವಿಜಯ್ ದೇವರಕೊಂಡಗೆ ಈ ಗೆಲುವು ಅನಿವಾರ್ಯವಾಗಿತ್ತು. ಲೈಗರ್ ಸೋಲಿನ ಬಳಿಕ ಹತಾಶೆಯಲ್ಲಿದ್ದ ವಿಜಯ್ ಗೆ ಈ ಗೆಲುವು ಖುಷಿ ನೀಡಿದೆ. ಎರಡು ದಿನಗಳಲ್ಲಿ ಖುಷಿ ಗಳಿಕೆ 50 ಕೋಟಿ ರೂ. ತಲುಪಿದೆ.

ಇದೇ ಖುಷಿಯಲ್ಲಿ ವಿಜಯ್ ದೇವರಕೊಂಡ ಟೆಂಪಲ್ ರನ್ ನಡೆಸಿದ್ದಾರೆ. ಯಾದಾದ್ರಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವರ ಸನ್ನಿಧಿಗೆ ತೆರಳಿ ವಿಜಯ್ ಪೂಜೆ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ