ಹಿಂದಿ ‘ಲಿಗರ್’ ಚಿತ್ರದಲ್ಲಿ ತಮ್ಮ ಪಾತ್ರಕ್ಕಾಗಿ ತಮ್ಮದೇ ಧ‍್ವನಿಯನ್ನು ಡಬ್ ಮಾಡುತ್ತಿರುವ ವಿಜಯ್ ದೇವರಕೊಂಡ
ಗುರುವಾರ, 18 ಫೆಬ್ರವರಿ 2021 (10:57 IST)
ಹೈದರಾಬಾದ್ : ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದ, ಪುರಿ ಜಗನ್ನಾಥ್ ಅವರ ಪ್ಯಾನ್ ಇಂಡಿಯಾ ಚಿತ್ರ ಲಿಗರ್ ನಲ್ಲಿ ಬಾಕ್ಸರ್ ಆಗಿ ನಟಿಸುತ್ತಿದ್ದಾರೆ.
ಇತ್ತೀಚಿನ ಮಾಹಿತಿ ಪ್ರಕಾರಣ ಈ ಚಿತ್ರವನ್ನು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಹಿಂದಿಯಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ ಎನ್ನಲಾಗಿದೆ. ಇದರಲ್ಲಿ ವಿಜಯ್ ದೇವರಕೊಂಡ ಅವರು ತಮ್ಮ ಪಾತ್ರಕ್ಕಾಗಿ ತಮ್ಮದೇ ಧ‍್ವನಿಯನ್ನು ಡಬ್ ಮಾಡಲು ನಿರ್ಧರಿಸಿದ್ದಾರಂತೆ. ಕರಣ್ ಜೋಹರ್ ಒತ್ತಾಯದ ಮೇರೆಗೆ ವಿಜಯ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.