ಬೇಸರ ಮರೆಸಲು ಅಭಿಮಾನಿಗಳಿಗಾಗಿ ಹಾಡಿದ ವಿಜಯ್ ಪ್ರಕಾಶ್

ಗುರುವಾರ, 26 ಮಾರ್ಚ್ 2020 (09:26 IST)
ಬೆಂಗಳೂರು: ಕೊರೋನಾವೈರಸ್ ನಿಂದಾಗಿ ನಿತ್ಯದ ಕಾಯಕ ಮಾಡಲಾಗದೇ ಮನೆಯೊಳಗೇ ಬಂಧಿಯಾಗಿರುವ ಅಭಿಮಾನಿಗಳಿಗಾಗಿ ಗಾಯಕ ವಿಜಯ್ ಪ್ರಕಾಶ್ ಹಾಡಿ ರಂಜಿಸಿದ್ದಾರೆ.


ಇತ್ತೀಚೆಗಷ್ಟೇ ಬಾಲಿವುಡ್ ಗಾಯಕ ಸೋನು ನಿಗಂ ಫೇಸ್ ಬುಕ್ ಲೈವ್ ಮುಖಾಂತರ ಲೈವ್ ಕನ್ಸರ್ಟ್ ಮಾಡಿದ್ದರು. ಇದೀಗ ವಿಜಯ್ ಪ್ರಕಾಶ್ ಇನ್ ಸ್ಟಾಗ್ರಾಂನಲ್ಲಿ ಲೈವ್ ಬಂದು ಹಾಡಿದ್ದಾರೆ.

ನಿಮ್ಮ ಇಷ್ಟದ ಹಾಡುಗಳನ್ನು ಪಟ್ಟಿ ಮಾಡಿ ತಿಳಿಸಿ ಎಂದು ವಿಜಯ್ ಪ್ರಕಾಶ್ ಕೇಳಿದ್ದರು. ಅದರಂತೆ ಅಭಿಮಾನಿಗಳು ಪಟ್ಟಿ ಮಾಡಿ ಹೇಳಿದ ಇಷ್ಟದ ಹಾಡುಗಳನ್ನು ಲೈವ್  ನಲ್ಲಿ ಹಾಡಿ ಖುಷಿ ನೀಡಿದ್ದಾರೆ. ಜತೆಗೆ ಸುರಕ್ಷಿತವಾಗಿ ಮನೆಯಲ್ಲೇ ಇರಿ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ