ಸ್ಯಾಂಡಲ್ ವುಡ್ ನಲ್ಲಿ ಇಂದು ಮೂರು ವಿಭಿನ್ನ ಸಿನಿಮಾ ರಿಲೀಸ್

ಶುಕ್ರವಾರ, 8 ಡಿಸೆಂಬರ್ 2023 (08:40 IST)
ಬೆಂಗಳೂರು: ಮತ್ತೊಂದು ಶುಕ್ರವಾರ ಬಂದಿದ್ದು, ಗಾಂಧಿನಗರದಲ್ಲಿ ಹೊಸ ಹೊಸ ಸಿನಿಮಾಗಳು ಥಿಯೇಟರ್ ಗೆ ಲಗ್ಗೆಯಿಡುತ್ತಿವೆ. ಇಂದು ಸ್ಯಾಂಡಲ್ ವುಡ್ ನಲ್ಲಿ ಒಟ್ಟು ಮೂರು ವಿಭಿನ್ನ ಸಿನಿಮಾಗಳು ತೆರೆಗೆ ಬರುತ್ತಿದೆ.

ಜಯತೀರ್ಥ ನಿರ್ದೇಶನದ ಧನ್ವೀರ್ ಗೌಡ-ಮೇಘಾ ಶೆಟ್ಟಿ ನಾಯಕ, ನಾಯಕಿಯಾಗಿ ಅಭಿನಯಿಸಿರುವ ಕೈವ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಲವ್ ಪ್ಲಸ್ ಆಕ್ಷನ್ ಕತೆಯಿದೆ. ಜೊತೆಗೆ ಧನ್ವೀರ್ ವಿಶಿಷ್ಟ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರೆ, ಮೇಘಾ ಶೆಟ್ಟಿ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಮಿಂಚಿದ್ದಾರೆ.

ವಿಜಯ್ ರಾಘವೇಂದ್ರ ನಿಯಮಿತವಾಗಿ ಸಿನಿಮಾ ಮಾಡುತ್ತಲೇ ಬಂದಿದ್ದಾರೆ. ಇದೀಗ ಎರಡು ತಿಂಗಳ ಅವಧಿಯಲ್ಲಿ ವಿಜಿ ಅಭಿನಯದ ಮತ್ತೊಂದು ಸಿನಿಮಾ ರಿಲೀಸ್ ಆಗುತ್ತಿದೆ. ವಿಜಯ್ ರಾಘವೇಂದ್ರ ಜೊತೆಗೆ ಸೋನು ಗೌಡ ನಾಯಕಿಯಾಗಿರುವ ‘ಮರೀಚಿ’ ಎನ್ನುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇಂದು ತೆರೆ ಕಾಣುತ್ತಿದೆ.

ಇನ್ನು, ಆಕ್ಷನ್, ಥ್ರಿಲ್ಲರ್ ಬೇಡ ಎನ್ನುವರಿಗಾಗಿ ನಗುವಿನ ರಸದೌತಣ ಬಡಿಸಲು ‘ಪೊಲಿಟಿಕ್ಸ್ ಕಲ್ಯಾಣ’ ಎನ್ನುವ ಸಿನಿಮಾ ಬಿಡುಗಡೆಯಾಗುತ್ತಿದೆ. ಇದರಲ್ಲಿ ಬಹುತೇಕ ಸ್ಯಾಂಡಲ್ ವುಡ್ ನ ಹಾಸ್ಯ ಕಲಾವಿದರ ದಂಡೇ ಅಭಿನಯಿಸುತ್ತಿದೆ. ವಿ. ಮನೋಹರ್, ಗಿರಿಜಾ ಲೋಕೇಶ್, ಸುನೇತ್ರಾ ಪಂಡಿತ್ ಸೇರಿದಂತೆ ಬಹುತಾರಾಣವಿದೆ. ಮದುವೆ ಮನೆಯಲ್ಲಿ ನಡೆಯುವ ಘಟನೆಗಳನ್ನೇ ಹಾಸ್ಯವಾಗಿ ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ