ಹೆತ್ತವರ ವಿರುದ್ಧವೇ ದೂರು ಕೊಟ್ಟ ತಮಿಳು ನಟ ವಿಜಯ್
ಸೆಪ್ಟೆಂಬರ್ 27 ರಂದು ವಿಜಯ್ ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ವಿಜಯ್ ತಂದೆ ಚಂದ್ರಶೇಖರ್ ವಿಜಯ್ ಅಭಿಮಾನಿ ಬಳಗ ವಿಜಯ್ ಮಕ್ಕಳ್ ಇಯಕಂ ರಾಜಕೀಯ ಪಕ್ಷವೆಂದು ಘೋಷಿಸಿದ್ದರು. ಇದು ವಿಜಯ್ ಅಸಮಾಧಾನಕ್ಕೆ ಕಾರಣವಾಗಿದೆ. ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ. ಯಾವುದೇ ಪಕ್ಷಕ್ಕೂ ನನ್ನ ಹೆಸರು ಸೇರಿಸಬೇಡಿ. ನನ್ನ ಹೆಸರು ದುರ್ಬಳಕೆ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.