ಹೊಸ ಸಿನಿಮಾ ಒಪ್ಪಿಕೊಂಡ ನಟ ವಿಜಯ್ ಸೂರ್ಯ

ಶುಕ್ರವಾರ, 10 ಸೆಪ್ಟಂಬರ್ 2021 (09:11 IST)
ಬೆಂಗಳೂರು: ಡಿಂಪಲ್ ಹೀರೋ ವಿಜಯ್ ಸೂರ್ಯ ಹೊಸ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ. ತಮ್ಮ ಬರ್ತ್ ಡೇ ಸಂದರ್ಭದಲ್ಲಿ ಅವರು ಈ ಗುಡ್ ನ್ಯೂಸ್ ಕೊಟ್ಟಿದ್ದಾರೆ.


ಕಿರುತೆರೆಯಲ್ಲಿ ಮೋಸ್ಟ್ ವಾಂಟೆಡ್ ನಟ ವಿಜಯ್ ಸೂರ್ಯ ಸ್ಯಾಂಡಲ್ ವುಡ್ ನಲ್ಲೂ ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿರುವ ಸಿನಿಮಾ ಎನ್ನಲಾಗಿದ್ದು, ವಿಜಯ್ ಸೂರ್ಯ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇನ್ನು, ವಿಜಯ್ ನಟಿಸುತ್ತಿರುವ ‘ವೀರಪುತ್ರ’ ಕ್ಲೈಮ್ಯಾಕ್ಸ್ ಹಂತದ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಬಿಡುಗಡೆಗೆ ಸಿದ್ಧವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ