ಡಿಸೆಂಬರ್ 31ರಂದು ಘೋಷಣೆ ಮಾಡುವ ಮೊದಲೇ ಲೀಕ್ ಆಯ್ತಾ ವಿಜಯ್ 65ನೇ ಚಿತ್ರ

ಶುಕ್ರವಾರ, 11 ಡಿಸೆಂಬರ್ 2020 (17:28 IST)
ಚೆನ್ನೈ : ನಿರ್ದೇಶಕ ಲೋಕೇಶ್ ಕನಗರಾಜ್ ನಿರ್ದೇಶನದ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಸದ್ಯದಲ್ಲೇ ಬಿಡುಗಡೆಗೊಳ್ಳಲು ಸಿದ್ಧವಾಗಿದೆ. ಆದರೆ ವಿಜಯ್ ಅವರ  ಮುಂದಿನ ಚಿತ್ರ ಯಾವುದೆಂಬುದು ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ.

ಆದರೆ ವಿಜಯ್ ಸನ್ ಪಿಕ್ಚರ್ಸ್  ನಿರ್ಮಾಣದಲ್ಲಿ ನಟಿಸಲಿದ್ದಾರೆ ಎಂಬುದು ಕಾಲಿವುಡ್ ಮೂಲದ ಮಾಹಿತಿಯಿಂದ ಖಚಿತವಾಗಿದೆ. ಹಾಗಾಗಿ ಸನ್ ಪಿಕ್ಚರ್ಸ್ ಡಿಸೆಂಬರ್ 31ರಂದು ಕಮಾಂಡರ್ 65ನೇ ಚಿತ್ರದ ನಿರ್ದೇಶಕ ಮತ್ತು ಸಂಯೋಜಕರ ಬಗ್ಗೆ ಅಧಿಕೃತ ಮಾಹಿತಿಯನ್ನು ಪ್ರಕಟಿಸಲಿದೆ ಎನ್ನಲಾಗಿದೆ.

ಆದರೆ ಈ ನಡುವೆ ವಿಜಯ್ ಅಭಿಮಾನಿಗಳು ‘ಟಾರ್ಗೆಟ್ ಕಿಂಗ್’ ಹೆಸರಿನಲ್ಲಿ ವಿಜಯ್ 65ನೇ ಚಿತ್ರವೆಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಪೋಸ್ಟ್ ಮಾಡಿದ್ದು, ಇದು ವೈರಲ್ ಆಗುತ್ತಿದೆ. ಇದನ್ನು ಅಭಿಮಾನಿಗಳು ಟ್ರಂಡ್ ಮಾಡಲು ಬಳಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ