ಲಾಕ್ ಡೌನ್ ನಲ್ಲಿ ಕೇವಲ ಅನುಷ್ಕಾ ಶರ್ಮಾ ಬಾಲ್ ಗಳಿಗೆ ವಿರಾಟ್ ಬ್ಯಾಟ್ ?

ಶುಕ್ರವಾರ, 25 ಸೆಪ್ಟಂಬರ್ 2020 (20:10 IST)
ಲಾಕ್ ಡೌನ್ ನಲ್ಲಿ ಕೇವಲ ಅನುಷ್ಕಾ ಶರ್ಮಾ ಬೌಲಿಂಗ್‍ ಗೆ ವಿರಾಟ್ ಕೊಹ್ಲಿ ಬ್ಯಾಟ್ ಮಾಡಿದ್ದಾರೆ ಎಂದಿರುವ ಮಾಜಿ ಕ್ರಿಕೆಟಿಗನ ವಿಡಿಯೋ ವೈರಲ್ ಆಗಿದೆ.


ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಅವರು ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ವಿರುದ್ಧ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ.

ಪಂದ್ಯದಲ್ಲಿ ಕ್ರಿಕೆಟಿಗರ ಕುಟುಂಬ ಹಾಗೂ ಪತ್ನಿಯರ ಹೆಸರನ್ನು ಎಳೆದು ತರುವುದಕ್ಕೆ ಅನುಷ್ಕಾ ಶರ್ಮಾ ಕಿಡಿಕಾರಿದ್ದರು.

ಈ ನಡುವೆ ತಾವು ಕೆಟ್ಟದಾಗಿ ಕಮೆಂಟ್ ಮಾಡಿಲ್ಲ ಎಂದು ಸುನಿಲ್ ಗವಾಸ್ಕರ್ ಸ್ಪಷ್ಟನೆ ನೀಡಿದ್ದಾರೆ.
ಲಾಕ್‍ಡೌನ್ ಸಮಯದಲ್ಲಿ ವಿರಾಟ್ ಅಭ್ಯಾಸ ಮಾಡಿರಲಿಲ್ಲ.   ಪತ್ನಿ ಅನುಷ್ಕಾ ಜೊತೆಗೆ ಪ್ರಾಕ್ಟೀಸ್ ಮಾಡುತ್ತಿದ್ದರು. ಲಾಕ್‍ಡೌನ್ ವೇಳೆ ವಿರಾಟ್ ಮತ್ತು ಅನುಷ್ಕಾ ಕ್ರಿಕೆಟ್ ಆಡುತ್ತಿರುವ ವಿಡಿಯೋ ಹರಿದಾಡಿತ್ತು. ಆ ವಿಡಿಯೋ ನೋಡಿ ಹೇಳಿಕೆ ನೀಡಿದ್ದೇನೆ ಎಂದು ಗವಾಸ್ಕರ್ ಸ್ಪಷ್ಟನೆ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ