ಯೋ ಯೋ ಟೆಸ್ಟ್ ಬಗ್ಗೆ ವಿರಾಟ್ ಕೊಹ್ಲಿ ಬಳಿ ಕೇಳಿ ತಿಳಿದುಕೊಂಡ ಪ್ರಧಾನಿ ಮೋದಿ

ಶುಕ್ರವಾರ, 25 ಸೆಪ್ಟಂಬರ್ 2020 (10:01 IST)
ನವದೆಹಲಿ: ಫಿಟ್ ಇಂಡಿಯಾ ಮೂವ್ ಮೆಂಟ್ ಗೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ವಿವಿಧ ಕ್ರೀಡಾ ತಜ್ಞರ ಜತೆಗೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದಾರೆ.

 

ಈ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ಪ್ರಧಾನಿ ಜತೆಗಿನ ಸಂವಾದದಲ್ಲಿ ಪಾಲ್ಗೊಂಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಂವಾದದಲ್ಲಿ ಪ್ರಧಾನಿ ಮೋದಿ ಭಾರತೀಯ ಕ್ರಿಕೆಟ್ ನಲ್ಲಿ ಕ್ರಿಕೆಟಿಗ ಫಿಟ್ನೆಸ್ ಲೆವೆಲ್ ಅಳೆಯಲು ನಡೆಸಲಾಗುವ ಯೋ ಯೋ ಟೆಸ್ಟ್ ಬಗ್ಗೆ ಕೇಳಿ ತಿಳಿದುಕೊಂಡರು. ನಿಮಗೂ ಇದು ಅನ್ವಯಿಸುತ್ತದೆಯೇ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಕೊಹ್ಲಿ ವಿಶ್ವದ ಇತರ ಕ್ರಿಕೆಟ್ ತಂಡದ ಹಾಗೇ ನಾವೂ ಫಿಟ್ನೆಸ್ ವಿಚಾರದಲ್ಲಿ ಗುರಿ ತಲುಪಬೇಕಾಗಿದೆ. ಹೀಗಾಗಿ ಈ ಟೆಸ್ಟ್ ನಡೆಸಲಾಗುತ್ತದೆ. ಇದನ್ನು ಎಲ್ಲಾ ಕ್ರಿಕೆಟಿಗರೂ ಪಾಲಿಸಬೇಕಾಗುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ