ಐಪಿಎಲ್ 13: ಆರ್ ಸಿಬಿ ಜೋಡೆತ್ತು ಕೊಹ್ಲಿ-ಎಬಿಡಿಗೆ ಹೊಸ ದಾಖಲೆ ಮಾಡುವ ಚಾನ್ಸ್

ಗುರುವಾರ, 24 ಸೆಪ್ಟಂಬರ್ 2020 (12:40 IST)
ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಬ್ಯಾಟಿಂಗ್ ಆಧಾರ ಸ್ತಂಬಗಳಾಗಿರುವ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಗೆ ಇಂದು ಪ್ರಮುಖ ದಾಖಲೆ ಮಾಡುವ ಅವಕಾಶವಿದೆ.


ಕಿಂಗ್ಸ್ ಇಲೆವೆನ್ ವಿರುದ್ಧದ ಇಂದಿನ ಪಂದ್ಯದಲ್ಲಿ ಕೊಹ್ಲಿ ಇನ್ನು 16 ರನ್ ಗಳಿಸಿದರೆ ಟಿ20 ಫಾರ್ಮ್ಯಾಟ್ ನಲ್ಲಿ 9000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಗೊಳಗಾಗಲಿದ್ದಾರೆ. ಈಗಾಗಲೇ ಐಪಿಎಲ್ ನಲ್ಲಿ ಗರಿಷ್ಠ ರನ್ ಸಾಧನೆ ಕೊಹ್ಲಿ ಹೆಸರಿನಲ್ಲಿದೆ. ಅತ್ತ ಎಬಿಡಿ ಇನ್ನು ಒಂದು ಸಿಕ್ಸರ್ ಸಿಡಿಸಿದರೆ ಟಿ20 ಕ್ರಿಕೆಟ್ ನಲ್ಲಿ 400 ಸಿಕ್ಸರ್ ಸಿಡಿಸಿದ ದಾಖಲೆ ಮಾಡಲಿದ್ದಾರೆ. ಈ ಟಿ20 ಕ್ರಿಕೆಟ್ ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಮೊದಲ ದ.ಆಫ್ರಿಕಾ ಕ್ರಿಕೆಟಿಗ ಮತ್ತು ಜಾಗತಿಕವಾಗಿ ಆರನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ