ಇಶಾಂತ್ ಶರ್ಮಾರನ್ನು ಒದ್ದು ಎಬ್ಬಿಸಿದ್ದರಂತೆ ವಿರಾಟ್ ಕೊಹ್ಲಿ!

ಬುಧವಾರ, 24 ಫೆಬ್ರವರಿ 2021 (09:40 IST)
ಅಹಮ್ಮದಾಬಾದ್: 100 ನೇ ಟೆಸ್ಟ್ ಆಡಲಿರುವ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಹಳೆಯ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ತಾವು ದೆಹಲಿ ಪರ ಆಡುತ್ತಿದ್ದ ದಿನಗಳನ್ನು ನೆನೆಸಿಕೊಂಡಿದ್ದಾರೆ.


‘ನಾವಿಬ್ಬರೂ ಜೊತೆಗೇ ರಾಜ್ಯದ ಪರ ಕ್ರಿಕೆಟ್ ಆಡಲು ಆರಂಭಿಸಿದ್ದೆವು. ರಣಜಿ ಕ್ರಿಕೆಟ್ ಆಡುವಾಗ ಹಲವು ಬಾರಿ ರೂಂ ಮೇಟ್ ಗಳಾಗಿದ್ದೆವು. ನನಗೆ ನೆನಪಿದೆ, ಇಶಾಂತ್ ಮೊದಲ ಬಾರಿಗೆ ಟೀಂ ಇಂಡಿಯಾಗೆ ಆಯ್ಕೆಯಾದಾಗ ಮಧ್ಯಾಹ್ನದ ನಂತರ ನಿದ್ರೆಯಲ್ಲಿದ್ದ. ನಾನು ಆತನಿಗೆ ಒದ್ದು ಎಬ್ಬಿಸಿ ಸಿಹಿ ಸುದ್ದಿ ಹೇಳಿದ್ದೆ. ನಮ್ಮಿಬ್ಬರ ನಡುವೆ ಅಂತಹ ವಿಶ್ವಾಸವಿದೆ. ಒಬ್ಬ ವೇಗಿಯಾಗಿ 100 ಟೆಸ್ಟ್ ಆಡುವುದು ನಿಜಕ್ಕೂ ಶ್ರೇಷ್ಠ ಸಾಧನೆ’ ಎಂದು ಇಶಾಂತ್ ರನ್ನು ಕೊಹ್ಲಿ ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ