ಗುಟ್ಟಾಗಿ ಮದುವೆಯಾಗಲು ನಿರ್ಧರಿಸಿದ ನಟ ವಿಷ್ಣು ವಿಶಾಲ್ -ಜ್ವಾಲಾ ಗುಟ್ಟಾ

ಬುಧವಾರ, 14 ಏಪ್ರಿಲ್ 2021 (11:07 IST)
ಹೈದರಾಬಾದ್ : ನಟ ವಿಷ್ಣು ವಿಶಾಲ್ ಮತ್ತು ಜ್ವಾಲಾ ಗುಟ್ಟಾ ಅವರು ಏಪ್ರಿಲ್ 22ರಂದು ಹೈದರಾಬಾದ್ ನಲ್ಲಿ  ಗುಟ್ಟಾಗಿ ಮದುವೆಯಾಗಲು ನಿಶ್ಚಯಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ನಟ ವಿಷ್ಣು ವಿಶಾಲ್ ಮತ್ತು ಜ್ವಾಲಾ ಗುಟ್ಟಾ ಅವರು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಹೈದರಾಬಾದ್ ನಲ್ಲಿ  ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ  ಏಪ್ರಿಲ್ 22ರಂದು ಗುಟ್ಟಾಗಿ ಹೈದರಾಬಾದ್ ನಲ್ಲಿ ಖಾಸಗಿ ಸಮಾರಂಭದಲ್ಲಿ ಮದುವೆಯಾಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿತ್ತು.

ಇದೀಗ ಈ ಬಗ್ಗೆ ಮಾಹಿತಿ ನೀಡಿದ ನಟ ವಿಷ್ಣು ವಿಶಾಲ್, ಇದು ರಿಜಿಸ್ಟರ್ ಮ್ಯಾರೇಜ್, ಕೊವಿಡ್ 19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಸಮಯದಲ್ಲಿ ನಾವು ಜವಾಬ್ದಾರರಾಗಿರಲು ಬಯಸಿದ್ದೇವೆ. ಆದ್ದರಿಂದ ನಾವು ಅದನ್ನು ಮುಚ್ಚಿಡಲು ನಿರ್ಧರಿಸಿದ್ದೇವೆ. ಕುಟುಂಬ ಮತ್ತು ಸ್ನೇಹಿತರನ್ನು ಮಾತ್ರ ಮದುವೆಗೆ ಆಹ್ವಾನಿಸಿದ್ದೇವೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ