ಕ್ರೀಡಾಪಟು ಪಾತ್ರದಲ್ಲಿ ಜೂನಿಯರ್ ಎನ್ ಟಿಆರ್

ಮಂಗಳವಾರ, 13 ಏಪ್ರಿಲ್ 2021 (12:23 IST)
ಹೈದರಾಬಾದ್ : ವೈಷ್ಣವ್ ತೇಜ್ ಮತ್ತು ಕೃತಿ ಶೆಟ್ಟಿ ಅಭಿನಯದ ಸೂಪರ್ ಹಿಟ್ ಚಿತ್ರ ‘ಉಪ್ಪೇನಾ’ವನ್ನು ನಿರ್ದೇಶಿಸಿದ ನಿರ್ದೇಶಕ ಬುಚಿ ಬಾಬು ಸನಾ ಅವರು ಇದೀಗ ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್ ಟಿಆರ್ ಅವರ ಜೊತೆ ಚಿತ್ರ ಮಾಡಲು ಹೊರಟಿದ್ದಾರೆ.

ಇದು ಕ್ರೀಡಾ ಆಧಾರಿತ ಚಿತ್ರವಾಗಿದ್ದು, ಇತ್ತೀಚೆಗೆ ಬುಚಿ ಬಾಬು ಅವರು ಸ್ಕ್ರಿಪ್ಟ್ ನ  ರೂಪರೇಖೆಯನ್ನು ಜೂನಿಯರ್ ಎನ್ ಟಿಆರ್ ಅವರಿಗೆ ವಿವರಿಸಿದ್ದಾರೆ. ಇದಕ್ಕೆ ನಟ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಚಿತ್ರದ ಪ್ರಮುಖ ನಟ ಬಹು ಕ್ರೀಡೆಗಳಲ್ಲಿ ಕ್ರೀಡಾಪಟು ಎಂದು ಹೇಳಲಾಗುತ್ತಿದೆ.

ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ದೊಡ್ಡ ಬಜೆಟ್ ನಲ್ಲಿ ನಿರ್ಮಿಸಲಿದ್ದಾರೆ, ಈ ಚಿತ್ರ ವಿಶಾಖಪಟ್ಟಣಂ ಹಿನ್ನಲೆಯಲ್ಲಿ ಸಿದ್ಧಪಡಿಸಿದ ಕ್ರೀಡಾ ಚಿತ್ರವಾಗಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ