ಮದುವೆ ದಿನ ಚಿನ್ನ-ಹಣ ದೋಚಿ ಪರಾರಿಯಾದ ವಧು

ಬುಧವಾರ, 14 ಏಪ್ರಿಲ್ 2021 (07:41 IST)
ಮುಜಫರ್ನಗರ : ವಿವಾಹವಾಗುವ ನೆಪದಲ್ಲಿ ಯುವತಿಯೊಬ್ಬಳು 1 ಲಕ್ಷ ರೂ ಮತ್ತು ಆಭರಣಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.

ದೇವಾಲಯವೊಂದರಲ್ಲಿ ಮದುವೆ ಆಯೋಜಿಸಲಾಗಿತ್ತು. ವಿವಾಹದಲ್ಲಿ ವಧುವಿನ ಕಡೆಯವರು ನಾಲ್ಕು ಮಂದಿ ಇದ್ದರು. ಮದುವೆ ಕಾರ್ಯ ನಡೆಯುತ್ತಿದ್ದಾಗ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಹೋದ ವಧು ಹಣ ಮತ್ತು ಆಭರಣಗಳ ಜೊತೆಗೆ ಓಡಿ ಹೋಗಿದ್ದಾಳೆ. ಬಳಿಕ ವಧುವನ್ನು ಕರೆಯುವ ನೆಪದಲ್ಲಿ ಅವರ ಕಡೆಯವರು ಪರಾರಿಯಾಗಿದ್ದಾರೆ.

ವಧುವಿನ ಕಡೆಯವರು ಯಾರು ಇಲ್ಲದಿರುವುದನ್ನು ನೋಡಿದ ವರನ ಕಡೆಯವರಿಗೆ ತಾವು ಮೋಸ ಹೋಗಿರುವುದು ತಿಳಿದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ