ದರ್ಶನ್, ಜಗ್ಗೇಶ್ ಜೊತೆ ಮತ್ತೆ ವೀಕೆಂಡ್ ವಿತ್ ರಮೇಶ್

ಗುರುವಾರ, 9 ಏಪ್ರಿಲ್ 2020 (09:21 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನವರಸನಾಯಕ ಜಗ್ಗೇಶ್ ಜೊತೆಗೆ ಹಿಂದೆ ಪ್ರಸಾರವಾಗಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೆ ಈ ವಾರ ಮರುಪ್ರಸಾರವಾಗಲಿದೆ.


ಹೇಗಿದ್ದರೂ ಹೊಸ ಕಾರ್ಯಕ್ರಮಗಳ ಚಿತ್ರೀಕರಣ ನಡೆದಿಲ್ಲ. ಹೀಗಾಗಿ ಹಳೆಯ ಕಾರ್ಯಕ್ರಮಗಳನ್ನೇ ಎಲ್ಲಾ ವಾಹಿನಿಗಳೂ ಪ್ರಸಾರ ಮಾಡುತ್ತಿವೆ. ಅದೇ ರೀತಿ ಜೀ ಕನ್ನಡ ಕೂಡಾ ತನ್ನ ಜನಪ್ರಿಯ ಕಾರ್ಯಕ್ರಮಗಳನ್ನು ಮರಳಿ ಪ್ರಸಾರ ಮಾಡುತ್ತಿದೆ.

ಹಿಂದೆ ದರ್ಶನ್ ಭಾಗವಹಿಸಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ದಾಖಲೆಯ ಟಿಆರ್ ಪಿ ಪಡೆದಿತ್ತು. ಅದೇ ರೀತಿ ಜಗ್ಗೇಶ್ ಭಾಗವಹಿಸಿದ್ದ ಎಪಿಸೋಡ್ ಗೂ ಉತ್ತಮ ವೀಕ್ಷಣೆ ಬಂದಿತ್ತು. ಹೀಗಾಗಿ ಈ ಶನಿವಾರ ಮತ್ತು ಭಾನುವಾರ ಈ ಎರಡು ಎಪಿಸೋಡ್ ಗಳನ್ನು ಜೀ ವಾಹಿನಿ ಮರಳಿ ಪ್ರಸಾರ ಮಾಡಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ