ಬೀದಿ ನಾಯಿಗಳ ರಕ್ಷಣೆಗೆ ‘ಜೋಡೆತ್ತು’ ದರ್ಶನ್, ಯಶ್ ಅಭಿಮಾನಿಗಳು ಮಾಡುತ್ತಿರುವುದೇನು ಗೊತ್ತಾ?

ಗುರುವಾರ, 2 ಏಪ್ರಿಲ್ 2020 (10:11 IST)
ಬೆಂಗಳೂರು: ಲಾಕ್ ಡೌನ್ ನಿಂದಾಗಿ ಮನುಷ್ಯರಿಗೆ ಮಾತ್ರವಲ್ಲ, ಬೀದಿ ನಾಯಿಗಳಿಗೂ ಒಪ್ಪೊತ್ತಿನ ಊಟಕ್ಕೆ ಸಂಚಕಾರ ಬಂದಿದೆ. ಈ ಬೀದಿ ನಾಯಿಗಳ ರಕ್ಷಣೆಗೆ ಇದೀಗ ರಾಕಿಂಗ್ ಸ್ಟಾರ್ ಯಶ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬಳಗ ಜತೆಯಾಗಿ ಕೆಲಸ ಮಾಡುತ್ತಿದೆ.


ಮಂಡ್ಯ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ‘ಜೋಡೆತ್ತು’ಗಳು ಎಂದು ಹೇಳಿಕೊಂಡು ಜತೆಯಾಗಿ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿದ್ದ ದರ್ಶನ್, ಯಶ್ ಇದೀಗ ಅಭಿಮಾನಿಗಳು ಜತೆಯಾಗಿ ಕೆಲಸ ಮಾಡಲು ಪ್ರೇರಣೆಯಾಗಿದ್ದಾರೆ.

ಇದೀಗ ಇಬ್ಬರ ಅಭಿಮಾನಿ ಬಳಗವೂ ಆಹಾರವಿಲ್ಲದೇ ಒದ್ದಾಡುತ್ತಿರುವ ಬೀದಿ ನಾಯಿಗಳಿಗೆ ಆಹಾರ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಅಭಿಮಾನಿಗಳೂ ಬಡವರಿಗೆ ಅನ್ನದಾನ ಮಾಡುತ್ತಿರುವುದರ ಜತೆಗೆ ನಾಯಿಗಳಿಗೂ ಆಹಾರ ಒದಗಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ