ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಕೆಲಸಕ್ಕೆ ಮೈಸೂರು ಸಂಸದರು, ಸಚಿವರ ಮೆಚ್ಚುಗೆ

ಶುಕ್ರವಾರ, 3 ಏಪ್ರಿಲ್ 2020 (09:23 IST)
ಮೈಸೂರು: ಕೊರೋನಾದಿಂದಾಗಿ ಲಾಕ್ ಡೌನ್ ಆದ ದಿನದಿಂದ ಬಡವರು, ನಿರ್ಗತಿಕರಿಗೆ ಪ್ರತಿನಿತ್ಯ ಊಟದ ವ್ಯವಸ್ಥೆ ಮಾಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬಳಗಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ, ಉಸ್ತುವಾರಿ ಸಚಿವ ವಿ ಸೋಮಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ದರ್ಶನ್ ಅಭಿಮಾನಿಗಳು ಬಳಗ ಊಟ ತಯಾರಿಸುವ ಸ್ಥಳಕ್ಕೆ ಭೇಟಿ ನೀಡಿದ ಪ್ರತಾಪ್ ಸಿಂಹ ಹಾಗೂ ಸೋಮಣ್ಣ ಕೆಲಸ ಕಾರ್ಯಗಳನ್ನು ಖುದ್ದಾಗಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೊಲೀಸರೊಂದಿಗೆ ಖುದ್ದಾಗಿ ಊಟದ ಹಾಲ್ ಗೆ ಭೇಟಿ ನೀಡಿ ಅಲ್ಲಿ ಸುರಕ್ಷಿತೆಗೆ ಒತ್ತು ನೀಡಲಾಗುತ್ತಿದೆಯೇ ಎಂದು ವೀಕ್ಷಿಸಿ ಸಂಸದರು ಬಳಿಕ ಇವರ ಸಮಾಜ ಸೇವೆಯನ್ನು ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ