ನಟ ದರ್ಶನ್ ಗೆ ಹೀಗೆ ಮಾಡಿದರೆ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಿರ್ದೇಶಕರೊಬ್ಬರು ಹೇಳಿದ್ರಂತೆ

ಸೋಮವಾರ, 30 ಜುಲೈ 2018 (06:22 IST)
ಬೆಂಗಳೂರು : ಜೀವನದಲ್ಲಿ ಕಷ್ಟಪಟ್ಟು ಮೇಲೆಬಂದ ನಟರಲ್ಲಿ ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಒಬ್ಬರು. ಇಂದು ಇವರು ತಮ್ಮ ಅಮೋಘವಾದ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಸ್ಟಾರ್ ಪಟ್ಟ ಪಡೆದುಕೊಂಡಿದ್ದಾರೆ. ಇಂತಹ ಪ್ರತಿಭಾವಂತ ನಟನಿಗೆ ಹೆಸರಾಂತ ನಿರ್ದೇಶಕರೊಬ್ಬರು ‘ನೀವು ಹೆಸರು ಬದಲಾಯಿಸಿಕೊಂಡರೆ ಅವಕಾಶ ಕೊಡುತ್ತೀನಿ' ಎಂದಿದ್ದರಂತೆ.


ಹೌದು. ನಟ ದರ್ಶನ್ ಅವರು ಚಿತ್ರರಂಗಕ್ಕೆ ಕಾಲಿಟ್ಟ ಪ್ರಾರಂಭದಲ್ಲಿ ಅವರು ಸಹನಟನಾಗಿ ದೇವರ ಮಗ, ಭೂತಯ್ಯನ ಮಕ್ಕಳು, ಕುಶಲವೇ ಕ್ಷೇಮವೇ, ಮಹಾಭಾರತ ಚಿತ್ರಗಳಲ್ಲಿ ಅಭಿನಯಿಸಿದ್ದರು. ಆ ವೇಳೆ ಹೆಸರಾಂತ ನಿರ್ದೇಶಕರೊಬ್ಬರು, ತಮ್ಮ ಚಿತ್ರದಲ್ಲಿನ ವಿಲನ್ ಪಾತ್ರವನ್ನು ನೀಡಲು ಮುಂದಾಗಿದ್ದರು. ಆದರೆ ನಿಮಗೆ ದರ್ಶನ್ ಎನ್ನುವ ಹೆಸರು ಅಷ್ಟೊಂದು ಸೂಕ್ತವೆನಿಸುತ್ತಿಲ್ಲ. ಹೀಗಾಗಿ ಹೆಸರು ಬದಲಾಯಿಸಿಕೊಂಡರೆ ಅವಕಾಶ ಕೊಡುತ್ತೀನಿ ಎಂದಿದ್ದರಂತೆ.


ಆದರೆ ಇದಕ್ಕೆ ಒಪ್ಪಿಕೊಳ‍್ಳದ ದರ್ಶನ್ ಅವರು 'ಅದು ನಮ್ಮ ಅಪ್ಪ-ಅಮ್ಮ ನೀಡಿದ ಹೆಸರು, ನೀವು ಅವಕಾಶ ಕೊಡದಿದ್ರೂ ಪರವಾಗಿಲ್ಲ, ನನ್ನ ಹೆಸರು ಮಾತ್ರ ಚೇಂಜ್ ಮಾಡ್ಕೋದಿಲ್ಲ' ಎಂದು ದಿಟ್ಟ ಉತ್ತರ ನೀಡಿದ್ದರಂತೆ. ಈ ವಿಚಾರವನ್ನು ದರ್ಶನ್ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ದರ್ಶನ್ ಅವರ ಬಗೆಗೆ ಮತ್ತಷ್ಟು ಅಭಿಮಾನ ಹೆಚ್ಚಾಗಿಸುವಂತೆ ಮಾಡುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ