‘ಪ್ರೀತಿಯ ನಡುವೆ ವಾರ್ ಅನ್ನೋ ಪದ ಬೇಡ’ ಹೀಗ್ಯಾಕೆ ಹೇಳಿದ್ರು ಸುದೀಪ್?

ಶನಿವಾರ, 28 ಜುಲೈ 2018 (06:45 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ನಡೆಯುತ್ತಿರುವ 'ಕರ್ನಾಟಕ ಚಲನಚಿತ್ರ ಕಪ್’ ನ ಮೊದಲ ಆವೃತ್ತಿ ಯಶಸ್ವಿಯಾಗಿದ್ದು, ಇದರಲ್ಲಿ ನಟ ಶಿವರಾಜ್ ಕುಮಾರ್ ಅವರ ತಂಡ ಜಯಸಾಧಿಸಿತ್ತು.


ಇದೀಗ ಎರಡನೇ ಆವೃತ್ತಿಗೆ ಸ್ಯಾಂಡಲ್ ವುಡ್ ನ ನಟರು, ನಿರ್ದೇಶಕರು ಅಕಾಡಕ್ಕೆ ಇಳಿದು ಹೋರಾಡಲು ಅಣಿಯಾಗುತ್ತಿದ್ದಾರೆ. ಈ ನಡುವೆ ಶಿವಣ್ಣ ಹಾಗೆ ಕಿಚ್ಚ ಸುದೀಪ್ ತಂಡಗಳು ಈ ಟೂರ್ನಿಯಲ್ಲಿ ಮುಖಾಮುಖಿಯಾಗಲಿದ್ದು,  ಇದಕ್ಕೆ ಶಿವಣ್ಣ ಹಾಗೂ ಕಿಚ್ಚ ಸುದೀಪ್ ವಾರ್ ಅಂತ ಬಿಂಬಿಸಲಾಗುತ್ತಿದೆ.  ಇದು ಕಿಚ್ಚ ಸುದೀಪ್ ಅವರ ಗಮನಕ್ಕೂ ಬಂದಿದೆ.


ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಅವರು,’ ಇದರಲ್ಲಿ ಇಡೀ ಚಿತ್ರರಂಗವೇ ಸೇರಿಕೊಂಡಿದೆ . ಉಪ್ಪಿ ಸಾರ್ , ಪುನೀತ್ , ಗಣೇಶ್ , ಯಶ್ , ಸೇರಿದಂತೆ ಟೆಕ್ನಿಷಿಯನ್ಸ್ , ನಿರ್ಮಾಪಕರು , ಮಾಧ್ಯಮದವರು ಎಲ್ಲರು ಇದರ ಭಾಗವಾಗಿದ್ದಾರೆ . ಇದರಲ್ಲಿ ನಾನು ಹಾಗೆ ಶಿವಣ್ಣ ಸಹ ಇದ್ದೇವೆ ಅಷ್ಟೆ . ಪ್ರೀತಿಯ ನಡುವೆ ವಾರ್ ಅನ್ನೋ ಪದ ಬೇಡ’ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ