‘ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದಲ್ಲಿ ಅಂಬಿ ಸ್ಟೈಲ್ ನೋಡಿ ಫಿದಾ ಆದ ಕನ್ನಡದ ನಟಿ ಯಾರು ಗೊತ್ತಾ?
ಶನಿವಾರ, 28 ಜುಲೈ 2018 (06:33 IST)
ಬೆಂಗಳೂರು : ಸುದೀಪ್ ಅವರ ಬ್ಯಾನರ್ ನಲ್ಲಿ ತಯಾರಾಗಿರುವ "ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರೀಕರಣ ಮುಗಿದಿದ್ದು, ತೆರೆಗೆ ಬರಲು ಸಿದ್ದವಾಗಿದೆ. ಇದೀಗ ರಿಲೀಸ್ ಆಗಿರುವ ಈ ಚಿತ್ರದ ಪೋಸ್ಟರ್ ವೊಂದರಲ್ಲಿ ನಟ ಅಂಬರೀಶ್ ಅವರ ಗೆಟಪ್ ಕಂಡು ಕನ್ನಡದ ನಟಿಯೊಬ್ಬರು ಫಿದಾ ಆಗಿದ್ದಾರೆ.
ಅವರು ಬೇರೆ ಯಾರು ಅಲ್ಲ. ನಟ ಅಂಬರೀಶ್ ಅವರ ಧರ್ಮಪತ್ನಿ ಸುಮಲತಾ ಅಂಬರೀಶ್. ಈ ಚಿತ್ರದ ಪೋಸ್ಟರ್ ನಲ್ಲಿ ಅಂಬರೀಶ್ ಅವರು ಜರ್ಕಿನ್ ತೊಟ್ಟು, ಹೆಲ್ಮೆಟ್ ಧರಿಸಿ, ಕಣ್ಣಿಗೆ ಕಪ್ಪು ಕನ್ನಡ ಹಾಕಿಕೊಂಡು ಬುಲ್ಲೆಟ್ ಬೈಕ್ನಲ್ಲಿ ಸವಾರಿ ಮಾಡುತ್ತಿದ್ದಾರೆ. ಈ ಲುಕ್ ಕಂಡು ಬೋಲ್ಡ್ ಆದ ನಟಿ ಸುಮಲತಾ ಅಂಬರೀಶ್ ಅವರು “ಹಿಂದೆಂದೂ ನಾನು ಅವರನ್ನೂ ಈ ಲುಕ್‌ನಲ್ಲಿ ನೋಡಿಲ್ಲ. ಈ ಚಿತ್ರವನ್ನು ತೆರೆಯ ಮೇಲೆ ನೋಡಲು ತುಂಬಾ ಉತ್ಸುಕಳಾಗಿದ್ದೇನೆ’' ಎಂದು ಟ್ವೀಟ್ ಮಾಡುವುದರ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಚಿತ್ರದಲ್ಲಿ ಅಂಬಿ ಅವರ ಯೌವ್ವನದ ಪಾತ್ರದಲ್ಲಿ ಕಿಚ್ಚ ಸುದೀಪ್ ಅವರು ನಟಿಸುತ್ತಿದ್ದಾರೆ. ಅಂಬರೀಶ್ ಜೋಡಿಯಾಗಿ ಸುಹಾಸಿನಿ ನಟಿಸುತ್ತಿದ್ದಾರೆ. ಈ ಚಿತ್ರ ತಮಿಳಿನ "ಪಾ ಪಾಂಡಿ'’ ಚಿತ್ರದ ರೀಮೇಕ್. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ಜೆಬಿನ್ ಜಾಕೋಬ್ ಛಾಯಾಗ್ರಹಣ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ