ಅಭಿಮಾನಿಗಳು ಪ್ರೆಗ್ನೆಂಟಾ? ಎಂದು ಕೇಳಿದ್ದಕ್ಕೆ ಸಮಂತಾ ಹೇಳಿದ್ದೇನು ಗೊತ್ತಾ?
ಆದರೆ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಸಮಂತಾ ಇತ್ತೀಚೆಗೆ ಅಭಿಮಾನಿಗಳ ಜೊತೆ ಚಾಟ್ ಮಾಡಿದ್ದಾರೆ. ಆ ವೇಳೆ ಅಭಿಮಾನಿಯೊಬ್ಬರು ನೀವು ಪ್ರೆಗ್ನೆಂಟಾ? ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನಟಿ, ನಾನು 2017ರಿಂದ ಗರ್ಭಿಣಿಯಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ, ಈ ಮಗು ನಿಜವಾಗಿಯೂ ಹೊರಬರಲು ಬಯಸುವುದಿಲ್ಲ ಅನಿಸುತ್ತೆ ಎಂದು ಅಚ್ಚರಿಯ ಉತ್ತರ ನೀಡಿ ಅಭಿಮಾನಿಯನ್ನು ದಂಗಾಗಿಸಿದ್ದಾರೆ.