ಯಶ್ ಹುಟ್ಟುಹಬ್ಬಕ್ಕೆ ಪತ್ನಿ ರಾಧಿಕಾ ಪಂಡಿತ್ ನೀಡಿದ ಗಿಫ್ಟ್ ಏನು ಗೊತ್ತಾ
ಮಂಗಳವಾರ, 9 ಜನವರಿ 2018 (06:39 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ನಟ ರಾಕಿಂಗ್ ಸ್ಟಾರ್ ಯಶ್ ಅವರು ಸೋಮವಾರದಂದು 32 ನೇ ವರ್ಷದ ಹುಟ್ಟುಹಬ್ಬವನ್ನು ತಮ್ಮ ನಿವಾಸದಲ್ಲಿ ಅಭಿಮಾನಿಗಳ ಸಮ್ಮೂಖದಲ್ಲಿ ಕೇಕ್ ಕತ್ತರಿಸುವುದರ ಮೂಲಕ ಆಚರಿಸಿಕೊಂಡರು. ಅವರ ಜೊತೆ ಅವರ ಪತ್ನಿ ನಟಿ ರಾಧಿಕಾ ಪಂಡಿತ್ ಕೂಡ ಇದ್ದರು.
ಸಹಜವಾಗಿ ಎಲ್ಲಾ ಅಭಿಮಾನಿಗಳಿಗೆ ನಟ ಯಶ್ ಗೆ ಅವರ ಪತ್ನಿ ರಾಧಿಕಾ ಅವರು ಏನು ಗಿಫ್ಟ್ ಕೊಟ್ಟಿರಬಹುದು ಎಂಬ ಕುತೂಹಲ ಇದ್ದೆಇರುತ್ತೆ. ಆದರೆ ರಾಧಿಕಾ ಅವರು ಮಾತ್ರ ಯಶ್ ಅವರಿಗೆ ಏನು ಗಿಫ್ಟ್ ಕೊಡದೆ ಬರಿಗೈಯಲ್ಲಿ ವಿಶ್ ಮಾಡಿದ್ದಾರಂತೆ. ರಾಧಿಕಾ ಅವರು ಫೇಸ್ ಬುಕ್ ನಲ್ಲೂ ಯಶ್ ಅವರಿಗೆ ಶುಭಾಶಯ ತಿಳಿಸಿದ್ದು, ಗಂಡನಿಗೆ ಬರ್ತ್ ಡೇ ಗಿಫ್ಟ್ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದರೆ, “ ನಾನು ನನ್ನದೆಲ್ಲವನ್ನು ಯಶ್ ಗೆ ನೀಡಿದ್ದೇನೆ. ಇನ್ನು ನೀಡೋಕೆ ನನ್ನ ಬಳಿ ಏನೂ ಇಲ್ಲ” ಎಂದು ಉತ್ತರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ