ಆಸ್ಪತ್ರೆ ಸೇರಿರುವ ನಟ ದರ್ಶನ್ ಸ್ಥಿತಿ ಏನಾಗಿದೆ, ವೈದ್ಯರು ನೀಡಿದ್ದಾರೆ ಡೆಡ್ ಲೈನ್

Krishnaveni K

ಶನಿವಾರ, 2 ನವೆಂಬರ್ 2024 (10:30 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಆರೋಪಿ ನಟ ದರ್ಶನ್ ಬೆನ್ನು ನೋವಿನ ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಸರ್ಜರಿ ಮಾಡಬೆಕಾ, ಫಿಸಿಯೋಥೆರಪಿ ಸಾಕಾ ಎನ್ನುವ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.
 

ದರ್ಶನ್ ನಿನ್ನೆ ಅಪರಾಹ್ನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ವಿಶೇಷ ವಿಐಪಿ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ವೈದ್ಯರು ಬಿಪಿ, ಶುಗರ್, ಬೆನ್ನು ನೋವಿನ ಸಾಮಾನ್ಯ ತಪಾಸಣೆ ಸೇರಿದಂತೆ ಪ್ರಾಥಮಿಕ ತಪಾಸಣೆಗಳನ್ನು ನೀಡಿದ್ದಾರೆ. ಈ ವೇಳೆ ಅವರ ಬೆನ್ನು ನೋವಿನ ತೀವ್ರತೆ ಬಗ್ಗೆ ವೈದ್ಯರಿಗೆ ಗೊತ್ತಾಗಿದೆ.

ಅವರ ಒಂದು ಕಾಲಿನಲ್ಲಿ ಸ್ಪರ್ಶ ಜ್ಞಾನ ಕಡಿಮೆಯಾಗಿದ್ದು ತೀವ್ರ ನೋವಿನಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಆದರೆ ಇದಕ್ಕೆ ಫಿಸಿಯೋಥೆರಪಿ ಸಾಕಾ ಅಥವಾ ಸರ್ಜರಿ ಬೇಕಾ ಎಂಬ ಬಗ್ಗೆ 48 ಗಂಟೆಗಳ ಪರಶೀಲನೆ ಬಳಿಕ ವೈದ್ಯರು ತೀರ್ಮಾನಕ್ಕೆ ಬರಲಿದ್ದಾರೆ. ಈ ವೇಳೆ ಎಲ್ಲಾ ವೈದ್ಯಕೀಯ ವರದಿಗಳು ಕೈ ಸೇರಲಿದ್ದು, ಅದಾದ ಬಳಿಕ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಹೀಗಾಗಿ ಇಂದು ಸಂಜೆ ವೇಳೆಗೆ ದರ್ಶನ್ ಗೆ ಶಸ್ತ್ರಚಿಕಿತ್ಸೆ ನಡೆಸುವ ಬಗ್ಗೆ ವೈದ್ಯರು ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಎಲ್ಲಾ ವೈದ್ಯಕೀಯ ವರದಿಗಳನ್ನು ದರ್ಶನ್ ಪರ ವಕೀಲರು ಹೈಕೋರ್ಟ್ ಗೆ ಸಲ್ಲಿಸಬೇಕಾಗುತ್ತದೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಷರತ್ತು ವಿಧಿಸಿ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ