ವಯಸ್ಸು 41 ಆದ್ರೂ ಈಗಾಲೂ ಬಳುಕುವ ಬಳ್ಳಿಯಂತಿರುವ ರಾಧಿಕಾ ಬ್ಯೂಟಿ ಸಿಕ್ರೇಟ್ ಏನು

Sampriya

ಶುಕ್ರವಾರ, 7 ಮಾರ್ಚ್ 2025 (19:49 IST)
Photo Courtesy X
ಬೆಂಗಳೂರು: ಕನ್ನಡದ ಖ್ಯಾತ ನಟಿ ರಾಧಿಕಾ ಪಂಡಿತ್ ಅವರು ಇಂದು 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತಡೇ ಹಿನ್ನೆಲೆ ನಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸರಣಿ ಫೋಟೋವನ್ನು ಹಂಚಿಕೊಂಡಿದ್ದಾರೆ.

ಕನ್ನಡದ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ರಾಧಿಕಾ ಅವರು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಕನ್ನಡದ ಶಿವರಾಜ್‌ಕುಮಾರ್‌, ಡಾ.ಪುನೀತ್ ರಾಜ್‌ಕುಮಾರ್, ಧ್ರುವ ಸರ್ಜಾ ಹಾಗೂ ನಟ ಯಶ್ ಸೇರಿದಂತೆ ಸ್ಟಾರ್‌ ನಟರ ಜತೆ ರಾಧಿಕಾ ಅಭಿನಯಿಸಿದ್ದಾರೆ. ನಟ ಯಶ್‌ ಹಾಗೂ ರಾಧಿಕಾ ಪ್ರೀತಿ ಮಾಡಿ, 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯ ಸಿನಿಮಾ ರಂಗದಿಂದ ಬ್ರೇಕ್ ಪಡೆದಿರುವ ರಾಧಿಕಾ ಅವರು ತಮ್ಮ ಇಬ್ಬರು ಮಕ್ಕಳ ಜತೆ ಸಮಯ ಕಳೆಯುತ್ತಿದ್ದಾರೆ.

ವಯಸ್ಸು 41 ಆದರೂ ರಾಧಿಕಾ ಇನ್ನೂ ಕಾಲೇಜು ಹುಡುಗಿಯಂತೆ ಕಾಣಿಸುತ್ತಿದ್ದಾರೆ. ಈಗಲೂ ಬಳುಕುವ ಬಳ್ಳಿಯಂತಿರುವ ರಾಧಿಕಾ ನೋಡಿ ಅವರ ಅಭಿಮಾನಿಗಳು ಬ್ಯೂಟಿ ಸಿಕ್ರೇಟ್ ಏನು ಎಂದು ಕೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ