ರಘು ಮುಖರ್ಜಿ ಹಾಗೂ ಅನುಪ್ರಭಾಕರ್ ದಂಪತಿ ಕಡೆಯಿಂದ ಬಂದ ಸಿಹಿಸುದ್ದಿ ಏನು ಗೊತ್ತಾ...?

ಶುಕ್ರವಾರ, 4 ಮೇ 2018 (07:02 IST)
ಬೆಂಗಳೂರು :  ನಟ ರಘು ಮುಖರ್ಜಿ ಅವರು ತಮ್ಮ ಫೇಸ್ಬುಕ್ ನಲ್ಲಿ ಅಭಿಮಾನಿಗಳಿಗೊಂದು ಸಿಹಿಸುದ್ದಿ ನೀಡಿದ್ದಾರೆ. ಅದೇನೆಂದರೆ ಅವರ ಪತ್ನಿ ನಟಿ ಅನುಪ್ರಭಾಕರ್ ಅವರು ತಾಯಿಯಾಗುತ್ತಿದ್ದಾರಂತೆ.


ಈ  ಖುಷಿ ವಿಚಾರವನ್ನು ತಿಳಿಸಿದ ರಘು ಮುಖರ್ಜಿ ಅವರು ತಮ್ಮ ಫೇಸ್ ಬುಕ್ ನಲ್ಲಿ,’ ಪ್ರತಿಯೊಬ್ಬ ಹೆಣ್ಣು ತನ್ನ ಜೀವನದುದ್ದಕ್ಕೂ ವಿವಿಧ ಪಾತ್ರಗಳನ್ನೂ ನಿಭಾಯಿಸುತ್ತಾಳೆ, ಅನು ಕೂಡ ಈಗಾಗಲೇ ಅನೇಕ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾಳೆ, ಈಗ ಅವಳು ಅಮ್ಮನಾಗಲು ರೆಡಿಯಾಗಿದ್ದಾಳೆ. ನೀನು ಖಂಡಿತ ಒಳ್ಳೆಯ ಅಮ್ಮನಾಗುತ್ತಿಯಾ’ ಎಂದು ಬರೆದು ಫೋಟೋವೊಂದನ್ನು ಪೋಸ್ಟ್ ಮಾಡಿ ಆ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ. ಈ ದಂಪತಿಗೆ ಹಲವು ಅಭಿಮಾನಿಗಳು ಶುಭ ಕೋರಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ