ಮಲಬದ್ಧತೆಯ ನಿವಾರಣೆಯಾಗಬೇಕೆಂದರೆ ಈ ಹಣ್ಣುಗಳ ಜ್ಯೂಸ್ ಕುಡಿಯಿರಿ

ಶುಕ್ರವಾರ, 4 ಮೇ 2018 (06:18 IST)
ಬೆಂಗಳೂರು : ಹೊಟ್ಟೆಗಳ ಸಮಾಸ್ಯೆಯಲ್ಲಿ ಮಲಬದ್ಧತೆ ಒಂದು ದೊಡ್ಡ ಸಮಸ್ಯೆಯಾಗಿದೆ. ಇದು ಕರುಳಿನ ಜೀರ್ಣ ಕ್ರೀಯೆ ಸಮಸ್ಯೆ ಕೂಡ ಆಗಿದೆ. ಇದರಿಂದ ದೇಹದಲ್ಲಿ ಹೆಚ್ಚು ನಿಶಕ್ತಿಯಾಗುತ್ತದೆ. ಮಲಬದ್ಧತೆಯ ಸಾಮಾನ್ಯ ಲಕ್ಷಣಗಳೆಂದರೆ ಕಡಿಮೆ ಕರುಳಿನ ಚಲನೆ, ಮಲವು ಕರುಳಿನಲ್ಲಿ ಹಾದುಹೋಗುವಾಗ ತೊಂದರೆಯಾಗುವುದು ಅಥವಾ ಮಲ ವಿಸರ್ಜಿಸುವಾಗ ನೋವು ಕಾಣಿಸಬಹುದು, ಹೊಟ್ಟೆ ಊದಿಕೊಳ್ಳುವುದು, ಕಿಬ್ಬೊಟ್ಟೆಯ ನೋವು ಇತ್ಯಾದಿ. ಕೆಲುವು ಹಣ್ಣುಗಳ ಜ್ಯೂಸ್ ಕುಡಿಯುದರಿಂದ ಇದನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.


*ನಿಂಬೆ ಜ್ಯೂಸ್ ’ನಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿದೆ. ನಿಮಗೆ ಮಲಬದ್ಧತೆಯಾಗಿದೆ ಎಂದು ಅನಿಸಿದರೆ ಕನಿಷ್ಠ ಎರಡು ಗ್ಲಾಸ್ ನಿಂಬೆ ರಸದ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಕುಡಿಯಿರಿ. ಇದು ಸುಲಭವಾಗಿ ಸಾಗಲು ಮೃದುಗೊಳಿಸಲು ಸಹಾಯಮಾಡುತ್ತದೆ.
*ಸೇಬಿನ ಜ್ಯೂಸ್ ನಲ್ಲಿ ಜೀರ್ಣಕ್ರಿಯೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುವ ಸೋರ್ಬಿಟೋಲ್’ನನ್ನು ಒಳಗೊಂಡಿದೆ. ಇದು ನಮ್ಮ ಆರೋಗ್ಯಕ್ಕೆ ಬೇಕಾದ ಉತ್ತಮವಾದ ಕಬ್ಬಿಣ ಅಂಶವನ್ನು ಕೂಡ ಹೊಂದಿದೆ.


*ಕಿತ್ತಳೆ ಜ್ಯೂಸ್’ನಲ್ಲಿ ವಿಟಮಿನ್ C ಅತ್ಯಧಿಕವಾಗಿದೆ. ಇದು ಫೈಬರ್ಗಳನ್ನು ಹೊಂದಿದು ಮಲವನ್ನು ಸುಲಭವಾಗಿಸುತ್ತದೆ. ನಿಮ್ಮ ಜೀರ್ಣಕಾರಿ ಚಕ್ರವನ್ನು ಸುಧಾರಿಸುಲು ವಿಟಮಿನ್ ಸಿ ಸಹಾಯ ಮಾಡುತ್ತದೆ.


 *ಕಲ್ಲಂಗಡಿ ಹಣ್ಣು ನಲ್ಲಿ ಬಹಳಷ್ಟು ನೀರು ಇರುವುದರಿಂದ ನಿಮ್ಮ ದೇಹ ಹೈಡ್ರೀಕರಿಸುವಂತೆ ಮಾಡುತ್ತದೆ ( ವಿಶೇಷವಾಗಿ ಬೇಸಿಗೆಯಲ್ಲಿ). ನಿಮ್ಮ ಜೀರ್ಣಾಂಗಗಳನ್ನು ತೆರವುಗೊಳಿಸಿ ಮತ್ತು ನಿಮ್ಮ ಕರುಳಿನ ಚಲನೆಯನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.


*ಮೊಸಂಬಿ ಜ್ಯೂಸ್  ಕರುಳಿನ ಪ್ರದೇಶಗಳಿಂದ ಜೀವಾಣು ತೆಗೆದುಹಾಕುವುದರಲ್ಲಿ ಸಹಾಯ ಮಾಡುವ ಆಮ್ಲಗಳನ್ನು ಹೊಂದಿದೆ, ಹಾಗೆ ಇದು ತಕ್ಷಣದ ಪರಿಹಾರವನ್ನು ನೀಡುತ್ತದೆ. ತ್ವರಿತ ಫಲಿತಾಂಶಕ್ಕಾಗಿ ಮೊಸಂಬಿ ಜ್ಯೂಸ್ ’ನಲ್ಲಿ ಸ್ವಲ್ಪ ಉಪ್ಪು ಸೇರಿಸಿ ಕುಡಿಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ