ವಿಶ್ವಸುಂದರಿಯಾದವರಿಗೆ ಯಾವ ಯಾವ ರೀತಿ ಆದಾಯ ಬರುತ್ತಾ ಗೊತ್ತಾ?

ಮಂಗಳವಾರ, 28 ನವೆಂಬರ್ 2017 (17:56 IST)
ಸುಮಾರು 17 ವರ್ಷಗಳ ಸುದೀರ್ಘ ನಿರೀಕ್ಷೆಯ ನಂತರ ಮಿಸ್ ವರ್ಲ್ಡ್ ಪಟ್ಟ ಭಾರತಕ್ಕೆ ದೊರೆತಿದೆ. ದೇಶದ ಹೆಮ್ಮೆಯ ಕುವರಿ ಮಾನುಷಿ ಚಿಲ್ಲರ್ ವಿಶ್ವ ಸುಂದರಿಯಾಗಿ ಆಯ್ಕೆಯಾಗಿ ವಿಶ್ವಕ್ಕೆ ಭಾರತದ ಹೆಗ್ಗಳಿಕೆಯನ್ನು ಸಾರಿದ್ದಾರೆ.
  
ಮಾನುಷಿಗಿಂತ ಮೊದಲು, ರೀಟಾ ಫಾರಿಯಾ, ಐಶ್ವರ್ಯ ರೈ ಬಚ್ಚನ್, ಡಯಾನಾ ಹೆಡನ್, ಯುಕ್ತಾ ಮುಖಿ ಮತ್ತು ಪ್ರಿಯಾಂಕಾ ಚೋಪ್ರಾ ವಿಶ್ವಸುಂದರಿಯರಾಗಿ, ಭಾರತೀಯ ಕುವರಿಯರು ಯಾರಿಗಿಂತ ಕಡಿಮೆಯಿಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
 
ವಿಶ್ವಸುಂದರಿಯಾದವರು ಎಷ್ಟು ಹಣ ಗಳಿಸುತ್ತಾರೆ? ಅವರಿಗೆ ಮತ್ಯಾವ ಲಾಭಗಳಿವೆ ಎನ್ನುವ ಬಗ್ಗೆ ಕುತೂಹಲ ಎಲ್ಲರಲ್ಲಿ ಇರುತ್ತದೆ
 
ಪ್ರಶಸ್ತಿಯೊಂದಿಗೆ ಬರುವ ಮೊದಲ ಅಸಾಮಾನ್ಯ ವಸ್ತುವೆಂದರೆ ಕಿರೀಟ. ಮಿಸ್ ವರ್ಲ್ಡ್ ಕಿರೀಟವನ್ನು ವಜ್ರಗಳು ಮತ್ತು ಬಹಳಷ್ಟು ಅಮೂಲ್ಯ ಹರಳುಗಳೊಂದಿಗೆ ಸಿದ್ದಪಡಿಸಲಾಗಿರುತ್ತದೆ.ಕಿರೀಟದ ವೆಚ್ಚವೆ 2 ಕೋಟಿ ರೂಪಾಯಿಗಳಿಂದ 5 ಕೋಟಿ ರೂಪಾಯಿಗಳಾಗಿರುತ್ತದೆ.
 
ಮಿಸ್ ವರ್ಲ್ಡ್ ಪಡೆಯುವ ನಗದು ಬಹುಮಾನದ ಮೊತ್ತ ಸುಮಾರು 10 ಕೋಟಿ ರೂ.
 
ಇದಲ್ಲದೆ, ಅವರು ಜಗತ್ತಿನ ಎಲ್ಲೆಡೆಯೂ ಸಂಪೂರ್ಣವಾಗಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
 
ಐಷಾರಾಮಿ ಬ್ರಾಂಡ್‌ಗಳ ಪ್ರಾಯೋಜಕತ್ವವನ್ನು ಸಹ ಪಡೆಯುತ್ತಾರೆ. ಇದರರ್ಥ ಅವಳು ಬಳಸುವ ಯಾವುದೇ ಉತ್ಪನ್ನಗಳನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆಯುತ್ತಾರೆ.
 
ಇದಲ್ಲದೆ, ಚಲನಚಿತ್ರವು ಚಿತ್ರರಂಗಕ್ಕೆ ಪ್ರವೇಶಿಸಲು ಬಾಗಿಲು ತೆರೆಯುತ್ತದೆ. ಬಾಲಿವುಡ್ ಸೇರಿದಂತೆ ಅನೇಕ ಪ್ರಾದೇಶಿಕ ಸಿನೆಮಾ ತಯಾರಕ ಸಂಸ್ಥೆಗಳಿಂದ ಭಾರಿ ಆಫರ್ ಪಡೆಯಲು ಆರಂಭಿಸುತ್ತಾರೆ. ಪ್ರಿಯಾಂಕಾ ಚೋಪ್ರಾ ಮತ್ತು ಐಶ್ವರ್ ರೈ ವಿಶ್ವಸುಂದರಿಯಾದ ನಂತರ ಬಾಲಿವುಡ್‌ನಲ್ಲಿ ಖ್ಯಾತಿಯನ್ನು ಪಡೆದಿರುವುದು ಉದಾಹರಣೆಯಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ