ನಟ ಶಂಕರ್ ನಾಗ್ ಪುತ್ರಿ ಯಾರು? ಏನು ಮಾಡ್ತಿದ್ದಾರೆ ಗೊತ್ತಾ?
ಸೋಮವಾರ, 19 ಜೂನ್ 2023 (10:27 IST)
ಬೆಂಗಳೂರು: ಕನ್ನಡ ಸಿನಿಮಾ ರಂಗದ ಕ್ರಿಯಾಶೀಲ ನಟ, ನಿರ್ದೇಶಕ ಶಂಕರ್ ನಾಗ್ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿ ಈ ಲೋಕವನ್ನೇ ಬಿಟ್ಟು ಹೋದರು.
ಅವರ ಕೆಲಸದ ಪರಿ, ಅವರ ಚುರುಕುತನ, ಬುದ್ಧಿಮತ್ತೆಯ ಕುರಿತು ಇಂದಿಗೂ ಅವರ ಒಡನಾಡಿಗಳು ನೆನೆಸಿಕೊಳ್ಳುತ್ತಲೇ ಇರುತ್ತಾರೆ. ಶಂಕರ್ ನಾಗ್ ಪತ್ನಿ ಆರುಂಧತಿ ನಾಗ್ ನಾಟಕ, ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರ ಮಗಳು ಬಣ್ಣದ ಲೋಕದಿಂದ ದೂರವೇ ಉಳಿದಿದ್ದಾರೆ.
ನಟ ಶಂಕರ್ ನಾಗ್ ಪುತ್ರಿ ಕಾವ್ಯಾ ನಾಗ್ ವೃತ್ತಿಯಲ್ಲಿ ವಕೀಲೆಯಾಗಿದ್ದು, ಎನ್ ಜಿಒಗಾಗಿ ಕೆಲಸ ಮಾಡುತ್ತಿದ್ದಾರೆ. 2010 ರಲ್ಲಿ ಅವರು ಬಾಲ್ಯದ ಗೆಳೆಯ ಸಲಿಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಪ್ಪ-ಅಮ್ಮನ ಮುದ್ದಿನ ಮಗಳು ಸಿನಿಮಾ ರಂಗಕ್ಕೆ ಕಾಲಿಡದೇ ತಮ್ಮದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.