ಭಾರತೀಯ ಸಿನಿಮಾ ರಂಗದ ಶ್ರೀಮಂತ ಸ್ಟಾರ್ ಕಿಡ್ ಯಾರು ಗೊತ್ತಾ?

ಸೋಮವಾರ, 18 ಡಿಸೆಂಬರ್ 2023 (13:26 IST)
Photo Courtesy: Twitter
ಹೈದರಾಬಾದ್: ರಾಜಕೀಯದಂತೆ ಸಿನಿಮಾಗಳಲ್ಲೂ ಸ್ಟಾರ್ ನಟರ ಮಕ್ಕಳು ಸಿನಿಮಾ ರಂಗಕ್ಕೆ ಬಂದು ತಾವೂ ಸ್ಟಾರ್ ಗಳಾಗಿ ಮೆರೆಯುತ್ತಿರುವ ಸಾಕಷ್ಟು ನಿದರ್ಶನಗಳಿವೆ.

ಅವರಲ್ಲಿ ರಾಮ್ ಚರಣ್ ತೇಜ, ದುಲ್ಕರ್ ಸಲ್ಮಾನ್, ಅಭಿಷೇಕ್ ಬಚ್ಚನ್ ಸೇರಿದಂತೆ ಹಲವರಿದ್ದಾರೆ. ಕೆಲವರು ಸಿನಿಮಾ ರಂಗದಲ್ಲಿ ಕ್ಲಿಕ್ ಆಗಿ ತಂದೆಯನ್ನು ಮೀರಿಸುವ ನಟರಾಗಿದ್ದರೆ ಮತ್ತೆ ಕೆಲವರು ಫ್ಲಾಪ್ ಆದವರೂ ಇದ್ದಾರೆ.

ಆದರೆ ತಮ್ಮ ಹೆತ್ತವರಂತೇ ತಾವೂ ಚಿತ್ರರಂಗದಲ್ಲಿ ಮಿಂಚಿ ಸ್ಟಾರ್ ಡಮ್ ಕಟ್ಟಿಕೊಂಡಿದ್ದಲ್ಲದೆ, ಶ್ರೀಮಂತರಾಗಿರುವ ನಟರು ಕೆಲವರು ಮಾತ್ರ. ಭಾರತೀಯ ಸಿನಿಮಾ ರಂಗದ ಅತ್ಯಂತ ಶ್ರೀಮಂತ ಸ್ಟಾರ್ ಕಿಡ್ ಯಾರು ಗೊತ್ತೇ?

ಅವರು ಬೇರೆ ಯಾರೂ ಅಲ್ಲ. ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ. ಗ್ಲೋಬಲ್ ಸ್ಟಾರ್ ಆಗಿ ಬೆಳೆದಿರುವ ರಾಮ್ ಚರಣ್ ಆಸ್ತಿ ಮೌಲ್ಯ ಬರೋಬ್ಬರಿ 1350 ಕೋಟಿ ರೂ. ಅವರ ಬಳಿ ಕೋಟ್ಯಾಂತರ ರೂಪಾಯಿ ಬಂಗಲೆ, ಪ್ರೈವೇಟ್ ಜೆಟ್, ಲಕ್ಷುರಿ ಕಾರ್ ಗಳು ಎಲ್ಲಾ ಇದ್ದು ಅಪ್ಪನನ್ನೂ ಮೀರಿಸುವ ಶ್ರೀಮಂತರಾಗಿದ್ದಾರೆ.

ಎರಡನೇ ಶ್ರೀಮಂತ ಸ್ಟಾರ್ ಕಿಡ್ ಎಂದರೆ ಹೃತಿಕ್ ರೋಷನ್. ಅವರ ಬಳಿ 750 ಕೋಟಿ ರೂ.ಗಳಷ್ಟು ಆಸ್ತಿಯಿದೆ. 520 ಕೋಟಿ ರೂ. ಆಸ್ತಿಗಳ ಒಡತಿ ಅಲಿಯಾ ಭಟ್ ಗೆ ಮೂರನೇ ಸ್ಥಾನ. ಉಳಿದಂತೆ 485 ಕೋಟಿ ರೂ. ಹೊಂದಿರುವ ಕರೀನಾ ಕಪೂರ್, 450 ಕೋಟಿ ರೂ. ಹೊಂದಿರುವ ಜ್ಯೂ.ಎನ್ ಟಿಆರ್, 365 ಕೋಟಿ ರೂ.ಗಳ ಒಡೆಯ ರಣಬೀರ್ ಕಪೂರ್ ಟಾಪ್ 10 ರೊಳಗೆ ಸ್ಥಾನ ಪಡೆಯುತ್ತಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ