ರಮ್ಯಾಗೆ ಮತ್ತೆ ಚಿತ್ರರಂಗಕ್ಕೆ ಬರಲು ಹೇಳಿದ ಸ್ಯಾಂಡಲ್ ವುಡ್ ನಟಿ ಇವರೇ?

ಶನಿವಾರ, 1 ಸೆಪ್ಟಂಬರ್ 2018 (07:12 IST)
ಬೆಂಗಳೂರು : ಒಂದುಕಾಲದಲ್ಲಿ ಸಿನಿಮಾ ರಂಗದಲ್ಲಿ ಸ್ಟಾರ್ ನಟಿ ಎಂದು ಹೆಸರು ಮಾಡಿದ ನಟಿ ರಮ್ಯಾ ಅನಂತರ ಸಿನಿಮಾರಂಗ ತೊರೆದು ರಾಜಕೀಯದತ್ತ ಮುಖ ಮಾಡಿದ್ದರು. ಆದರೆ ಇದೀಗ ಸ್ಯಾಂಡಲ್ ವುಡ್ ನ ತುಪ್ಪದ ಹುಡುಗಿ ನಟಿ ರಾಗಿಣಿ ರಮ್ಯ ಗೆ ಮತ್ತೆ ಚಿತ್ರರಂಗಕ್ಕೆ ಬರುವಂತೆ ಟ್ವೀಟ್ ಮಾಡಿದ್ದಾರೆ.


ಕೆಲ ವರ್ಷಗಳ ಹಿಂದೆ ರಮ್ಯಾ ಮತ್ತು ರಾಗಿಣಿ ಯ ನಡುವೆ ಕೆಲವು ವಿಷಯಕ್ಕೆ ಮನಸ್ತಾಪ ಉಂಟಾಗಿತ್ತು. ಅದರ ಸಲುವಾಗಿ ಎಲ್ಲಿಯೂ ರಮ್ಯಾ ಬಗ್ಗೆ ರಾಗಿಣಿ ಮಾತಾನಾಡುತ್ತಿರಲಿಲ್ಲ. ಆದರೆ ಇತ್ತಿಚೆಗೆ ರಮ್ಯಾ ಅಭಿಮಾನಿಯೊಬ್ಬ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ 'ರಮ್ಯಾ ನೀವು ಮತ್ತೇ ಚಿತ್ರರಂಗಕ್ಕೆ ಬರಬೇಕು ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಬೇಕು' ಎಂದು ಟ್ವೀಟ್ ಮಾಡಿದ್ದಾರೆ.


ಅದಕ್ಕೆ ಸ್ಯಾಂಡಲ್ ವುಡ್ ನ ತುಪ್ಪದ ಹುಡುಗಿ ನಟಿ ರಾಗಿಣಿ ರಮ್ಯಾ ಅಭಿಮಾನಿ ಮಾಡಿರುವ ಟ್ವೀಟ ಅನ್ನು ರೀ ಟ್ವೀಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ