ಸ್ಯಾಂಡಲ್ ವುಡ್ ನ ಈ ಸ್ಟಾರ್ ನಟರಲ್ಲಿ ಶ್ರೀಮಂತ ನಟ ಯಾರು ಗೊತ್ತಾ?

ಶುಕ್ರವಾರ, 20 ಜುಲೈ 2018 (15:29 IST)
ಬೆಂಗಳೂರು : ಕನ್ನಡ ಚಿತ್ರರಂಗದ ಸ್ಟಾರ್ ನಟರಾದ ಸುದೀಪ್, ದರ್ಶನ್, ಯಶ್, ಪುನೀತ್, ಶಿವರಾಜ್ ಕುಮಾರ್, ಉಪೇಂದ್ರ, ಗಣೇಶ್ ಅವರು ತಮ್ಮ ಅಮೋಘವಾದ ನಟನೆಯ ಮೂಲಕ ಸಿನಿಮಾ ರಸಿಕರ ಮನಗೆದ್ದು ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆದರೆ ಈ ಸ್ಟಾರ್ ನಟರಲ್ಲಿ ಯಾರು ಸ್ಯಾಂಡಲ್ ವುಡ್ ನ ಶ್ರೀಮಂತ ನಟ ಎಂಬ ಚರ್ಚೆ  ಈಗ ಶುರುವಾಗಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ


*ಕಿರುತೆರೆಯಲ್ಲಿ ನಟಿಸುವುದರ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್ ಅವರು ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿರುವ ಈ ನಟ. ಇವರು ಅದ್ಭುತವಾದ ನಟನೆಯ ಮೂಲಕ ಇಂದು ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಮೂಲಗಳು ಪ್ರಕಾರ ಇವರು ಹೊಂದಿರುವ ಆಸ್ತಿ 50-80 ಕೋಟಿ.


*ಕಾಮಿಡಿ ಟೈಮ್ ಶೋನಿಂದ ಗುರುತಿಸಿಕೊಂಡ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಹನಟನಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿದ್ದರು. ಆದರೆ ಇಂದು ಇವರರೊಬ್ಬ ಖ್ಯಾತ ನಟರೆನಿಸಿಕೊಂಡಿದ್ದಾರೆ. ಸಿನಿಮಾ ಜೊತೆಯಲ್ಲೇ ಡೈಮಾಂಡ್ ಬ್ಯೂಸಿನೆಸ್ ಮಾಡಿಕೊಂಡಿರುವ ನಟ ಗಣೇಶ್ 100 ಕೋಟಿ ಆಸ್ತಿ ಹೊಂದಿದ್ದಾರಂತೆ.


*A ಚಿತ್ರದ ಮೂಲಕ ರಾತ್ರೋರಾತ್ರಿ ಸ್ಟಾರ್ ಡೈರೆಕ್ಟರ್ ಆದ ರಿಯಲ್ ಸ್ಟಾರ್ ಉಪೇಂದ್ರ ಅವರು, 4-5 ಕೋಟಿ ಸಂಭಾವನೆ ಪಡೆಯುತ್ತಾರೆ. ಕೋಟಿ ಕೋಟಿ ರೆಸಾರ್ಟ್ ಮೇಲೆ ಹೂಡಿಕೆ ಮಾಡಿರುವ ಇವರು 100-150 ಕೋಟಿಯ ಆಸ್ತಿ ಹೊಂದಿದ್ದಾರಂತೆ.


*ಕನ್ನಡ‌ ಚಿತ್ರರಂಗದಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಕಾರ್ ಗಳು ಹೊಂದಿರುವ ಏಕೈಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಇಂದು ಬಹುಬೇಡಿಕೆಯ ನಟ ಎನಿಸಿಕೊಂಡಿರುವ ಇವರು ದುಬೈಯಲ್ಲಿ investment ಹಾಗೂ ಅವರ ಜಮೀನು ಎಲ್ಲ ಸೇರಿ 150-170 ಕೋಟಿಯ ಸರ್ದಾರ ಎನ್ನುತ್ತಿದೆ ಮೂಲಗಳು.


*ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಕಾಲಿವುಡ್, ಬಾಲಿವುಡ್, ಟಾಲಿವುಡ್, ಹಾಲಿವುಡ್ ನಲ್ಲೂ ತಮ್ಮದೇ ಆದ ಛಾಪು ಮೂಡಿಸಿದ ನಟ ಕಿಚ್ಚ ಸುದೀಪ್. ಇವರು ಕೋಟಿ ಸಂಭಾವನೆ ಪಡೆಯುವುದರ ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋ, ಧಾರಾವಾಹಿ ನಿರ್ಮಾಣ ಎಲ್ಲವೂ ಸೇರಿ 200 ಕೋಟಿಯ ಒಡೆಯ..

*ಆನಂದ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಬ್ಯಾಕ್ ಟೂ ಬ್ಯಾಕ್ ಸಿನಿಮಾ ಹೊಂದಿರುವ ಏಕೈಕ ನಟ. ಮೂಲಗಳ ಪ್ರಕಾರ ಇವರು ಹೊಂದಿರುವ ಆಸ್ತಿ 200-250 ಎನ್ನಲಾಗುತ್ತಿದೆ.


*ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಪವರ್ ಸ್ಟಾರ್ ಎನಿಸಿಕೊಂಡಿರುವ ನಟ ಪುನೀತ್ ರಾಜ್‍ಕುಮಾರ್. ಸ್ಯಾಂಡಲ್ ವುಡ್ ನಲ್ಲಿ 6-7 ಕೋಟಿ ಸಂಭಾವನೆ ಪಡೆಯುವ ಇವರು, ಕಾಫಿ ತೋಟ, ಮಾಲ್, ಅಡಿಯೋ ಕಂಪನಿ, ಧಾರಾವಾಹಿ ನಿರ್ಮಾಣ ಹಾಗೂ ಸಿನಿಮಾ ನಿರ್ಮಾಣ ಹಾಗೂ ಜಮೀನು ಎಲ್ಲ ಸೇರಿ ಪವರ್ ಸ್ಟಾರ್ ಒಟ್ಟು 200-300 ಕೋಟಿಯ ರಾಜಕುಮಾರ ಎನ್ನಲಾಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ