ಸದ್ಯದಲ್ಲೇ ನಟಿ ರಾಧಿಕಾ ಪಂಡಿತ್ ಮಡಿಲಿಗೆ ‘ಮರಿ ರಾಕಿಂಗ್ ಸ್ಟಾರ್’ ಬರ್ತಾರಂತೆ

ಮಂಗಳವಾರ, 17 ಜುಲೈ 2018 (14:43 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ರಾಕಿಂಗ್​ ಸ್ಟಾರ್​ ಯಶ್​ ಹಾಗೂ ನಟಿ ರಾಧಿಕಾ ಪಂಡಿತ್​​ ದಾಂಪತ್ಯ ಜೀವನಕ್ಕೆ ಕಾಲಿಟ್ಟು 2 ವರ್ಷ ಕಳೆದಿದೆ. ಆದರೆ ಈವರೆಗೂ ಮಗುವಿನ ಬಗ್ಗೆ ಯಾವುದೇ ಸಿಹಿ ಸುದ್ದಿ ನೀಡಿಲ್ಲ. ಆದರೆ ಈ ಬಗ್ಗೆ ಇದೀಗ ನಟ ಯಶ್ ಅವರು ಮನಬಿಚ್ಚಿ ಮಾತನಾಡಿದ್ದಾರೆ.


ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗಷ್ಟೆ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಅದ್ಭುತವಾಗಿ ಆಟವಾಡಿ 25 ಲಕ್ಷ ಗೆದ್ದುಕೊಂಡು ಹೋದರು. ಆದರೆ ಶೋ ಮಧ್ಯೆ ಯಶ್ ಅವರ ತಾಯಿ, ತಮ್ಮ ಮಗನಿಗೆ ''ತಾಯಿಯಾಗಿ ಅಲ್ಲದೇ ಒಬ್ಬ ಅಭಿಮಾನಿಯಾಗಿ ಕೇಳ್ತಿದ್ದೀನಿ, ನಾನು ಅಜ್ಜಿ ಆಗೋದು ಯಾವಾಗ...? ''ಎಂದು ಕೇಳಿದ್ದರು.


ಇದಕ್ಕೆ ಉತ್ತರಿಸಿದ ಯಶ್ ‘ಮದುವೆಯಾದ ಮೇಲೆ ನನಗೆ ಒತ್ತಡವಿದೆ. ನನ್ನ ತಾಯಿ, ಸಂಬಂಧಿಕರು ಎಲ್ಲರು ಕೇಳ್ತಿದ್ದಾರೆ. ಆದ್ರೂ ನನಗೆ ಸಂಕೋಚ. ಎಲ್ಲೂ ಚರ್ಚೆ ಮಾಡೋಕು ಆಗಲ್ಲ. ಹೋಗ್ಲಿ ಬಿಡಿ, ನಮ್ಮಮ್ಮ ಸರಿಯಾದ ಜಾಗದಲ್ಲೇ ಕೇಳಿದ್ದಾರೆ.....ಆದಷ್ಟೂ ಬೇಗ....ಸದ್ಯಕ್ಕೆ ಅಷ್ಟೇ ಹೇಳೋದು...''ಎಂದು ನಗುತ್ತಾ  ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ