ಎಣ್ಣೆ ಚರ್ಮದವರು ಯಾವ ಆಹಾರ ಪದಾರ್ಥಗಳನ್ನು ಸೇವಿಸಬಾರದು ಗೊತ್ತಾ...?

ಶುಕ್ರವಾರ, 26 ಜನವರಿ 2018 (11:48 IST)
ಬೆಂಗಳೂರು : ಎಲ್ಲರಿಗೂ ತ್ವಚೆಯ  ಕಾಳಜಿಯಿರುತ್ತದೆ. ಆಯ್ಲೀ ಸ್ಕಿನ್ ಇದ್ದರೆ, ಮೊಡವೆ ಜಾಸ್ತಿ ಎನ್ನುವ ಭಯ ಕೆಲವರಿಗಿರುತ್ತದೆ. ಅಂತವರು  ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸದಿರುವುದು ಒಳ್ಳೆಯದು.


ಹಾಲು : ಹಾಲು ನಮ್ಮ ಜೀವನಕ್ಕೆ ಒಳ್ಳೆಯದಿರಬಹುದು. ಆದರೆ ಇದರಲ್ಲಿರುವ ಅಂಶ ನಮ್ಮ ದೇಹದಲ್ಲಿ ಜಿಡ್ಡಿನ ಗ್ರಂಥಿಗಳ ಬೆಳವಣಿಗೆಗೆ ಕಾರಣವಾಗುತ್ತದೆ.


ಮಾಂಸ : ಮಾಂಸದಲ್ಲಿ ಸೋಡಿಯಂ ಅಂಶ ಹೆಚ್ಚಿರುತ್ತದೆ. ಹಾಗು ನೀರಿನಂಶ ಸಂಗ್ರಹವಾಗಲು ಕಾರಣವಾಗುತ್ತದೆ. ಇದರಿಂದ ಚರ್ಮದಲ್ಲಿ ಜಿಡ್ಡು ಸಂಗ್ರಹವಾಗುತ್ತದೆ.


ಚಾಕಲೇಟ್ : ಎಲ್ಲರಿಗೂ ಚಾಕಲೇಟ್ ಇಷ್ಟವೇ. ಹಾಗಂತ ಕೆಲವು ಸಿಹಿಯಾದ ಕೋಕ್ ಇರುವ ಚಾಕಲೇಟ್ ಗಳು ನಿಮ್ಮ ಚರ್ಮದಲ್ಲಿ ಜಿಡ್ಡಿನಾಂಶವನ್ನು ಹೆಚ್ಚುಮಾಡುತ್ತವೆ.


ಮಾವಿನ ಹಣ್ಣು : ಮಾವಿನ ಹಣ್ಣು ಬಾಯಿಗೆ ರುಚಿ ಕೊಡುತ್ತದೆ. ಆದರೆ ಇದು ದೇಹವನ್ನು ಹೀಟ್ ಮಾಡುವುದರಿಂದ ಮೊಡವೆ ಉಂಟುಮಾಡುವುದಲ್ಲದೆ, ಚರ್ಮವನ್ನು ಜಿಡ್ಡು ಜಿಡ್ಡಾಗಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ