ಸುದೀಪ್ ಅಭಿಮಾನಿಯೊಬ್ಬರು ಕನ್ನಡ ಕಲಿಯುತ್ತಿರುವುದು ಯಾಕೆ? ಆ ಅಭಿಮಾನಿ ಎಲ್ಲಿಯವರು...?
ಭಾನುವಾರ, 25 ಮಾರ್ಚ್ 2018 (07:05 IST)
ಬೆಂಗಳೂರು : ಅಭಿಮಾನಿಗಳು ತಮ್ಮ ನೆಚ್ಚಿನ ನಟರಿಗಾಗಿ ಏನೆಲ್ಲಾ ಮಾಡುತ್ತಾರೆ ಎಂದು ನಾವು ಹಲವು ಬಾರಿ ಕೇಳಿರುತ್ತೇವೆ. ಅದೇರೀತಿ ಕಿಚ್ಚ ಸುದೀಪ್ ಅವರ ತಮಿಳಿನ ಅಭಿಮಾನಿಯೊಬ್ಬ ಅವರಿಗಾಗಿ ಕನ್ನಡ ಕಲಿಯುತ್ತಿದ್ದಾನಂತೆ.
ಹೌದು. ಆತನಿಗೆ ಕಿಚ್ಚ ಸುದೀಪ್ ಅವರ ಕನ್ನಡ ಸಿನಿಮಾಗಳನ್ನು ನೋಡವ ಹಂಬಲವಿದೆಯಂತೆ. ಆದರೆ ಆತ ತಮಿಳುನಾಡಿನವನಾದ ಕಾರಣ ಕನ್ನಡ ಭಾಷೆ ಗೊತ್ತಿಲ್ಲವಾದ್ದರಿಂದ ಆತ ಕನ್ನಡ ಭಾಷೆ ಕಲಿಯಲು ಮುಂದಾಗಿದ್ದಾನೆ. ಈ ಬಗ್ಗೆ ಆತ ಸುದೀಪ್ ಅವರಿಗೆ ಟ್ವೀಟ್ ಮೂಲಕ ,’ ಸರ್ ನಾನು ತಮಿಳುನಾಡಿನವನು. ನನಗೆ ನೀವಂದ್ರೆ ತುಂಬಾ ಇಷ್ಟ. ನಾನು ಕನ್ನಡ ಕಲಿಯುತ್ತಿದ್ದೇನೆ. ನಾನು ನಿಮ್ಮ ಡಬ್ಬಿಂಗ್ ಸಿನಿಮಾಗಳಾದ 'ಈಗ', 'ಬಾಹುಬಲಿ', 'ಪುಲಿ', 'ರಕ್ತಚರಿತ್ರ' ನೋಡಿದ್ದೇನೆ. ನಾನು ನಿಮ್ಮ ಅಭಿನಯಕ್ಕೆ ಮತ್ತು ನಿಮ್ಮ ಕಿಲ್ಲಿಂಗ್ ಲುಕ್ ಗೆ ಮನಸೋತಿದ್ದೇನೆ. ನಾನು ನಿಮ್ಮ ಉಳಿದ ಚಿತ್ರಗಳನ್ನ ನೋಡಲು ನಿರ್ಧರಿಸಿದ್ದು, ಅದಕ್ಕಾಗಿ ಕನ್ನಡ ಕಲಿಯುತ್ತಿದ್ದೇನೆ' ಎಂದು ತಿಳಿಸಿದ್ದಾನೆ. ಇದಕ್ಕೆ ಸುದೀಪ್ ಅವರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ