ರೆಡಿಯೋ ಜಾಕಿ ರಾಪಿಡ್ ರಶ್ಮಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು ಯಾಕೆ…?
ಸೋಮವಾರ, 16 ಏಪ್ರಿಲ್ 2018 (06:34 IST)
ಬೆಂಗಳೂರು : ರೆಡಿಯೋ ಜಾಕಿ ರಾಪಿಡ್ ರಶ್ಮಿ ಅವರು ಸೋಶಿಯಲ್ ಮೀಡಿಯಾದಲ್ಲಿ ತನಗೆ ಅತ್ಯಾಚಾರದ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದಾರೆ.
ಇತ್ತೀಚೆಗಷ್ಟೇ ‘ರಾಜರಥ’ ಸಿನಿಮಾದ ಕುರಿತಾಗಿ ಪ್ರಶ್ನೆಯೊಂದನ್ನು ಕೇಳಿ ಭಂಡಾರಿ ಸಹೋದರರನ್ನು ವಿವಾದದಲ್ಲಿ ಸಿಲುಕುವಂತೆ ಮಾಡಿದ ರೆಡಿಯೋ ಜಾಕಿ ರಾಪಿಡ್ ರಶ್ಮಿ ಅವರಿಗೆ ಫೇಸ್ ಬುಕ್ ಹಾಗೂ ಯೂಟ್ಯೂಬ್ ನಲ್ಲಿ ಕೆಲವು ಕಿಡಿಗೇಡಿಗಳು "ನಿನ್ನ ರೇಟ್ ಎಷ್ಟು?" ಎಂದು ಕೇಳುವುದರ ಜೊತೆಗೆ ಅಶ್ಲೀಲ ಪದಗಳನ್ನು ಉಪಯೋಗಿಸಿ ಮೆಸೇಜ್ ಕಳುಹಿಸಿ ಕಿರುಕುಳ ಕೊಟ್ಟಿದ್ದಾರೆ. ಅಲ್ಲದೇ ಅತ್ಯಾಚಾರದ ಬೆದರಿಕೆಯನ್ನೂ ಕೂಡ ಹಾಕಿರುವ ಹಿನ್ನಲೆಯಲ್ಲಿ ಇದೀಗ ರಾಪಿಡ್ ರಶ್ಮಿ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ