ಇಂತವರ ಮನೆಯಲ್ಲಿ ಊಟ ಮಾಡಿದರೆ ಮಹಾ ಪಾಪ ಸುತ್ತಿಕೊಳ್ಳುತ್ತದೆಯಂತೆ!

ಸೋಮವಾರ, 16 ಏಪ್ರಿಲ್ 2018 (05:56 IST)
ಬೆಂಗಳೂರು :  ಬದುಕಲು ಅನ್ನ, ನೀರು ಬೇಕು.‌ಇದು ಎಲ್ಲರಿಗೂ ಗೊತ್ತಿರುವ ವಿಷಯ. ಪ್ರತಿಯೊಂದು ಅನ್ನದ ಅಗುಳಿನ ಮೇಲೆ ತಿನ್ನುವವರ ಹೆಸರು ಬರೆದಿರುತ್ತದೆಯಂತೆ. ಅನ್ನವನ್ನು ದೇವರ ರೂಪದಲ್ಲಿ ಪೂಜಿಸಲಾಗುತ್ತದೆ. 'ಅನ್ನದಾನ ಮಹಾದಾನ' ಎಂದು ನಂಬಲಾಗಿದೆ. ಆದರೆ ಗರುಡ ಪುರಾಣ ಕೆಲವೊಬ್ಬರ ಮನೆಯಲ್ಲಿ ಅನ್ನ, ಆಹಾರ ಸೇವನೆ ಹಾನಿಕಾರಕವೆಂದು ಹೇಳಿದೆ.


ಕಳ್ಳರು ಅಥವಾ ಅಪರಾಧಿಗಳ ಮನೆಯಲ್ಲಿ ಎಂದೂ ಆಹಾರ ಸೇವನೆ ಮಾಡಬಾರದು.‌ ಅಂತಹವರ ಮನೆಯಲ್ಲಿ ಆಹಾರ ಸೇವನೆ ಮಾಡುವುದರಿಂದ ಅವರ ಪಾಪ ನಮಗೆ ಸುತ್ತಿಕೊಳ್ಳುತ್ತದೆಯಂತೆ.


ಚರಿತ್ರಹೀನ ವ್ಯಕ್ತಿಗಳ ಮನೆಯಲ್ಲೂ ಭೋಜನ ಮಾಡಬಾರದೆಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
ಬೇರೆಯವರ ದೌರ್ಬಲ್ಯವನ್ನು ದುರುಪಯೋಗ ಪಡಿಸಿಕೊಂಡು ತನ್ನ ಲಾಭಕ್ಕೆ ಬಳಸಿಕೊಳ್ಳುವ ವ್ಯಕ್ತಿಯ ಮನೆಯಲ್ಲೂ ಊಟ ಮಾಡಬಾರದು.


ಕೋಪವೇ ವ್ಯಕ್ತಿಯ ದೊಡ್ಡ ಶತ್ರು ಒಳ್ಳೆಯ ಹಾಗು ಕೆಟ್ಟದರ ನಡುವಿನ ವ್ಯತ್ಯಾಸವನ್ನು ಕೋಪಗೊಂಡ ವ್ಯಕ್ತಿ ಮರೆಯುತ್ತಾನೆ. ಇದರಿಂದ ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಅವರ ಮನೆಯಲ್ಲಿ ಊಟ ಮಾಡುವುದರಿಂದ ನಿಮ್ಮ ಸ್ವಭಾವ ಕೂಡ ಅದೇ ರೀತಿಯಾಗುತ್ತದೆ.


ಮಾದಕ ವಸ್ತುಗಳನ್ನು ಮಾರಾಟ ಮಾಡುವ ವ್ಯಕ್ತಿಗಳ ಮನೆಯಲ್ಲಿ ಕೂಡ ಊಟ ಮಾಡಬಾರದು. ಅಂತವರ ಮನೆಯಲ್ಲಿ ಆಹಾರ ಸೇವನೆ ಮಾಡಿದರೇ ಅವರ ಪಾಪ ನಮ್ಮ ಬೆನ್ನು ಹತ್ತುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ