ಕಿಚ್ಚನ ನೋಡಲು 650 ಕಿ.ಮೀ. ನಡೆದೇ ಬಂದ ಮಹಿಳಾ ಅಭಿಮಾನಿಗಳು
ಗುಲ್ಬರ್ಗಾದಿಂದ ಇಬ್ಬರು ಮಹಿಳಾ ಅಭಿಮಾನಿಗಳು ಕಿಚ್ಚ ಸುದೀಪ್ ಭೇಟಿ ಮಾಡಲು ಬೆಂಗಳೂರುವರೆಗೆ 650 ಕಿ. ಮೀ. ಪಾದಯಾತ್ರೆ ಮಾಡಿದ್ದಾರೆ. ಇದಕ್ಕಾಗಿ 14 ದಿನ ತೆಗೆದುಕೊಂಡಿದ್ದಾರೆ.
ತಮಗಾಗಿ ಇಂತಹ ಸಾಹಸ ಮಾಡಿದ ಅಭಿಮಾನಿಗಳನ್ನು ಕಿಚ್ಚ ಮನೆಗೆ ಕರೆಸಿಕೊಂಡು ಮಾತನಾಡಿಸಿದ್ದಾರೆ. ವಿಶೇಷವೆಂದರೆ ಸುದೀಪ್ ಅವರ ಎದುರು ಕೂರಲೂ ಇಷ್ಟಪಡದೇ ನಿಂತೇ ಮಾತನಾಡಿಸಿ ಗೌರವ ತೋರಿಸಿದ್ದಾರೆ.