ಅಂಬಿ ಪಾರ್ಥಿವ ಶರೀರದ ಫೋಟೋ ತೆಗೆದು ಟ್ರೋಲ್ ಆದ ನಟ ಯಶ್

ಸೋಮವಾರ, 26 ನವೆಂಬರ್ 2018 (09:28 IST)
ಬೆಂಗಳೂರು : ಅಂಬರೀಶ್ ಅವರ ಪಾರ್ಥೀವ ಶರೀರದ ಫೋಟೋ ತೆಗೆದು ನಟ ಯಶ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಂಬಿ ತೀರಿಕೊಂಡ ಹಿನ್ನಲೆಯಲ್ಲಿ ಅವರ ಅಂತಿಮ ದರ್ಶನ ಪಡೆದ ನಟ ಯಶ್ ಅವರು ಅಂಬರೀಷ್ ಪಾರ್ಥೀವ ಶರೀರದ ಫೋಟೋ ತೆಗೆದಿದ್ದರು. ಅವರು ಫೋಟೊ ತೆಗೆಯುತ್ತಿರುವುದು  ವಿಡಿಯೋವೊಂದರಿಂದ ತಿಳಿದುಬಂದಿದ್ದು,  ಇದೀಗ ವೈರಲ್ ಆಗಿದೆ.



ಇದನ್ನು ನೋಡಿದ ನೆಟ್ಟಿಗರು ಒಬ್ಬ ನಟನಾಗಿ ಜನ ಸಾಮಾನ್ಯರಂತೆ ಭಿನ್ನ ಭಿನ್ನವಾದ ಆಯಂಗಲ್ ನಲ್ಲಿ ಫೋಟೋ ತೆಗೆಯುವುದು ಎಷ್ಟು ಸರಿ ಎಂದು ಟ್ರೋಲ್ ಮಾಡಿದ್ದಾರೆ.


ಆದರೆ ನಟ ಯಶ್ ಅವರು ಶನಿವಾರ ರಾತ್ರಿ ಅಂಬರೀಷ್ ಸಾವಿನ ಸುದ್ದಿ ಕೇಳಿದ ತಕ್ಷಣ ವಿಕ್ರಂ ಆಸ್ಪತ್ರೆಗೆ ಬಂದಿದ್ದರು. ಅಲ್ಲದೇ ಮಂಡ್ಯಕ್ಕೆ ಬಂದ ಅಂಬಿ ಪಾರ್ಥೀವ ಶರೀರವನ್ನು ಹೆಲಿಕಾಪ್ಟರ್ ಬಳಿಯಿಂದ ದರ್ಶನಕ್ಕೆ ನಿಗದಿಪಡಿಸಿದ ಜಾಗದವರೆಗೂ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಚಿವ ಪುಟ್ಟರಾಜು ಅವರ ಜೊತೆ ಸೇರಿ ನಟ ಯಶ್ ತಮ್ಮ ಹೆಗಲ ಮೇಲೆ ಹೊತ್ತು ಸಾಗಿದರು. ಅಂಬಿ ಕುಟುಂಬದವರ ದುಃಖದಲ್ಲಿಯೂ ನಟ ಯಶ್ ಪಾಲ್ಗೊಂಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ