ಯಶ್ ಮುಂದಿನ ಸಿನಿಮಾಗೆ ಹಾಲಿವುಡ್ ನಿರ್ದೇಶಕನಿಂದ ಸ್ಟಂಟ್?

ಬುಧವಾರ, 27 ಸೆಪ್ಟಂಬರ್ 2023 (09:10 IST)
Photo Courtesy: Twitter
ಲಂಡನ್: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಘೋಷಣೆಗೆ ಕಾಯುತ್ತಿರುವ ಅಭಿಮಾನಿಗಳಿಗೆ ಅವರು ಹಾಲಿವುಡ್ ಸ್ಟಂಟ್ ನಿರ್ದೇಶಕ ಜೆ.ಜೆ. ಪೆರ್ರಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಹೆಚ್ಚಿಸಿದೆ.

ಲಂಡನ್ ನಲ್ಲಿ ಹಾಲಿವುಡ್ ನ ಖ್ಯಾತ ಸ್ಟಂಟ್ ನಿರ್ದೇಶಕನನ್ನು ಯಶ್ ಭೇಟಿ ಮಾಡಿದ್ದಾರೆ. ಯಶ್ 19 ಗೆ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಹಾಲಿವುಡ್ ಸ್ಟಂಟ್ ನಿರ್ದೇಶಕನನ್ನು ಭೇಟಿ ಮಾಡಿರುವುದು ಅಭಿಮಾನಿಗಳ ಕಾತುರತೆ ಹೆಚ್ಚಿಸಿದೆ.

ಯಶ್ ಮುಂದಿನ ಸಿನಿಮಾದಲ್ಲಿ ಕಾರ್ ರೇಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದಕ್ಕಾಗಿಯೇ ಜೆಜೆ ಪೆರ್ರಿ ಬಳಿ ಕಾರ್ ರೇಸಿಂಗ್ ತರಬೇತಿ ಪಡೆಯುತ್ತಿರಬಹುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ