ಯಶ್19 ಟೈಟಲ್ ಘೋಷಣೆ: ಟೈಟಲ್ ಜೊತೆ ರಿಲೀಸ್ ದಿನಾಂಕವೂ ಪ್ರಕಟ

ಶುಕ್ರವಾರ, 8 ಡಿಸೆಂಬರ್ 2023 (10:10 IST)
Photo Courtesy: Twitter
ಬೆಂಗಳೂರು: ಕೊನೆಗೂ ಎಲ್ಲರೂ ನಿರೀಕ್ಷಿಸಿದ್ದ ಆ ಗಳಿಗೆ ಬಂದೇ ಬಿಟ್ಟಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಟೈಟಲ್ ಇದೀಗ ತಾನೇ ಘೋಷಣೆಯಾಗಿದೆ.

ಯಶ್19 ಸಿನಿಮಾಗೆ ‘ಟಾಕ್ಸಿಕ್’ ಎಂದು ಟೈಟಲ್ ನೀಡಲಾಗಿದೆ. ಎಲ್ಲರ ಊಹೆಯಂತೇ ಸಿನಿಮಾವನ್ನು ಮಲಯಾಳಂ ಮೂಲದ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸಲಿದ್ದಾರೆ. ಈ ಮೂಲಕ ಯಶ್19 ಗೆ ಓರ್ವ ಮಹಿಳಾ ನಿರ್ದೇಶಕಿ ಎನ್ನುವುದು ಪಕ್ಕಾ ಆಗಿದೆ.

ಕೆವಿಎನ್ ಪ್ರೊಡಕ್ಷನ್ಸ್ ಚಿತ್ರವನ್ನು ನಿರ್ಮಿಸುತ್ತಿದೆ. ಚಿಕ್ಕ ಟೀಸರ್ ಮೂಲಕ ಟೈಟಲ್ ಇಡಲಾಗಿದ್ದು, 2025 ರ ಏಪ್ರಿಲ್ 10 ರಂದು ಸಿನಿಮಾ ರಿಲೀಸ್ ಮಾಡುತ್ತಿರುವುದಾಗಿ ಯಶ್ ಘೋಷಿಸಿದ್ದಾರೆ. ಹೀಗಾಗಿ ಯಶ್ ಮುಂದಿನ ಸಿನಿಮಾ ನೋಡಲು ಇನ್ನೂ ಒಂದು ವರ್ಷಕ್ಕೂ ಅಧಿಕ ಸಮಯ ಕಾಯಬೇಕು.

ಇದು ಡ್ರಗ್ಸ್ ಮಾಫಿಯಾ ಕುರಿತಾದ ಆಕ್ಷನ್ ಥ್ರಿಲ್ಲರ್ ಸಿನಿಮಾ. ಟೀಸರ್ ನೋಡಿದರೆ ಮೈನವಿರೇಳಿಸುವ ಸಾಹಸ ದೃಶ್ಯಗಳಿರುವುದು ಪಕ್ಕಾ ಎನಿಸುತ್ತದೆ. ಇದೂ ಕೂಡಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ನಿರ್ಮಾಣವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ