ಕೆಜಿಎಫ್ 3 ಸ್ಕ್ರಿಪ್ಟ್ ಕೆಲಸ ಮುಗಿದಿದೆ: ಪ್ರಶಾಂತ್ ನೀಲ್

ಗುರುವಾರ, 7 ಡಿಸೆಂಬರ್ 2023 (14:05 IST)
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತಿ ಹೆಚ್ಚಿಸಿದ ಸಿನಿಮಾ ಕೆಜಿಎಫ್. ಇದೀಗ ಚಿತ್ರದ ಮೂರನೇ ಭಾಗದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಅಪ್ ಡೇಟ್ ಕೊಟ್ಟಿದ್ದಾರೆ.

ಪ್ರಶಾಂತ್ ನೀಲ್ ಕೆಜಿಎಫ್ 1 ಮಾಡಿದಾಗ ಯಾರೂ ಈ ಮಟ್ಟಿಗೆ ಹೆಸರು ಮಾಡಬಹುದು ಎಂದುಕೊಂಡಿರಲಿಲ್ಲವೇನೋ. ಆದರೆ ಕೆಜಿಎಫ್ 2 ವಿಶ್ವದ ಗಮನವನ್ನೇ ಸೆಳೆಯಿತು. 1000 ಕೋಟಿ ಕ್ಲಬ್ ಸೇರಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಕೆಜಿಎಫ್ 2 ಸಿನಿಮಾದ ಕೊನೆಯಲ್ಲಿ ಕೆಜಿಎಫ್ 3 ಬಗ್ಗೆ ಚಿತ್ರತಂಡ ಸುಳಿವು ಕೊಟ್ಟಿತು. ಇದೀಗ ಕೆಜಿಎಫ್ 3 ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಅಪ್ ಡೇಟ್ ಕೊಟ್ಟಿದ್ದಾರೆ.

ಸದ್ಯಕ್ಕೆ ಸಲಾರ್ ಸಿನಿಮಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪ್ರಶಾಂತ್ ನೀಲ್, ಕೆಜಿಎಫ್ 3 ಸ್ಕ್ರಿಪ್ಟ್ ಕೆಲಸಗಳು ಮುಗಿದಿದೆ ಎಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೆಜಿಎಫ್ 3 ಕೂಡಾ ಯಶ್ ಜೊತೆಗೇ ನಡೆಯಲಿದೆ ಎಂದಿದ್ದಾರೆ. ಸದ್ಯಕ್ಕೆ ಇಬ್ಬರೂ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಆ ಕೆಲಸಗಳು ಮುಗಿದ ಬಳಿಕೆ ಕೆಜಿಎಫ್ 3 ಗೆ ಚಾಲನೆ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ