ಡಿಸೆಂಬರ್ 8 ಕ್ಕೆ ಯಶ್19 ಸಿನಿಮಾ ಟೈಟಲ್ ಘೋಷಣೆ

ಸೋಮವಾರ, 4 ಡಿಸೆಂಬರ್ 2023 (11:53 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಬಗ್ಗೆ ಈಗ ಒಂದೊಂದೇ ಅಪ್ ಡೇಟ್ ಸಿಗುತ್ತಿದೆ. ಡಿಸೆಂಬರ್ 8 ಕ್ಕೆ ಟೈಟಲ್ ರಿವೀಲ್ ಮಾಡುವುದಾಗಿ ಯಶ್ ಘೋಷಿಸಿದ್ದಾರೆ.

ರಾಕಿಭಾಯಿ ಯಶ್ ನಿನ್ನೆಯಷ್ಟೇ ತಮ್ಮ ಇನ್ ಸ್ಟಾ ಡಿಪಿಯನ್ನು ‘ಲೋಡಿಂಗ್’ ಎನ್ನುವ ಫೋಟೋ ಆಗಿ ಬದಲಾಯಿಸಿದ ಕೂಡಲೇ  ಅವರ ಮುಂದಿನ ಸಿನಿಮಾ ಘೋಷಣೆ ಬಗ್ಗೆ ಸುಳಿವು ಸಿಕ್ಕಿತ್ತು.

ಇದೀಗ ಯಶ್ ತಮ್ಮ ಮುಂದಿನ ಸಿನಿಮಾ ಟೈಟಲ್ ಡಿಸೆಂಬರ್ 8 ಕ್ಕೆ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಯಶ್19 ಗಾಗಿ ಹಲವು ದಿನಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ಗುಡ್ ನ್ಯೂಸ್ ಆಗಿದೆ.

ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಸುಳಿವು ನೀಡುತ್ತಿದ್ದಂತೇ ಅದರ ಪ್ರೊಡಕ್ಷನ್ ಯಾರದ್ದು, ನಿರ್ದೇಶಕ ಯಾರಿರಬಹುದು ಎಂಬಿತ್ಯಾದಿ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಎಲ್ಲದಕ್ಕೂ ಡಿಸೆಂಬರ್ 8 ರಂದು ಉತ್ತರ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ