ಯಶ್19: 9.55 ರ ಮುಹೂರ್ತಕ್ಕೆ ಕಾಯ್ತಿದ್ದಾರೆ ರಾಕಿ ಭಾಯಿ ಫ್ಯಾ ನ್ಸ್

ಶುಕ್ರವಾರ, 8 ಡಿಸೆಂಬರ್ 2023 (08:20 IST)
Photo Courtesy: Twitter
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಇಂದಿನ ಈ ದಿನಕ್ಕಾಗಿ ಅದು ಎಷ್ಟು ದಿನದಿಂದ ಕಾಯುತ್ತಿದ್ದಾರೆ. ಕೊನೆಗೂ ಯಶ್19 ಘೋಷಣೆ ದಿನ ಬಂದೇ ಬಿಟ್ಟಿದೆ.

ಇಂದು ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಘೋಷಣೆಯಾಗಲಿದೆ. ಬೆಳಿಗ್ಗೆ 9.55 ಕ್ಕೆ ಟೈಟಲ್ ಘೋಷಣೆ ಮಾಡುವುದಾಗಿ ಯಶ್ ಈಗಾಗಲೇ ಪ್ರಕಟಿಸಿದ್ದಾರೆ.

ಕೆಜಿಎಫ್ 2 ಬಳಿಕ ಸುಮಾರು ಒಂದೂವರೆ ವರ್ಷ ಸಮಯ ತೆಗೆದುಕೊಂಡು ಸಾಕಷ್ಟು ಹೋಂ ವರ್ಕ್ ಮಾಡಿಕೊಂಡು ಯಶ್ ಹೊಸ ಸಿನಿಮಾ ಕೈಗೆತ್ತಿಕೊಳ್ಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಈ ಸಿನಿಮಾಗೆ ಬಂಡವಾಳ ಹೂಡಲಿದೆ.

ಆದರೆ ನಿರ್ದೇಶಕರು ಯಾರು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಹೀರೋಯಿನ್ ಆಗಿ ಸೌತ್ ಸೂಪರ್ ಸ್ಟಾರ್ ಸಾಯಿ ಪಲ್ಲವಿ ಅಭಿನಯಿಸಬಹುದು ಎಂಬ ರೂಮರ್ ಗಳಿವೆ. ಎಲ್ಲದಕ್ಕೂ ಇಂದು ಬೆಳಿಗ್ಗೆ 9.55 ಕ್ಕೆ ಉತ್ತರ ಸಿಗುವ ನಿರೀಕ್ಷೆಯಲ್ಲಿ ಯಶ್ ಅಭಿಮಾನಿಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ