ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾದಿಂದ ಹೊರಬಿದ್ದ ಅಮೂಲ್ಯ!

ಶುಕ್ರವಾರ, 17 ಮಾರ್ಚ್ 2017 (10:50 IST)
ಬೆಂಗಳೂರು: ಇತ್ತೀಗಷ್ಟೇ ಮಾಜಿ ಕಾರ್ಪೋರೇಟರ್ ಪುತ್ರ ಜಗದೀಶ್ ಜತೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟಿ ಅಮೂಲ್ಯ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮುಗುಳು ನಗೆ ಸಿನಿಮಾದಿಂದ ಹೊರ ಬಿದ್ದಿದ್ದಾರೆ.

 
ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದ ಮುಹೂರ್ತದಲ್ಲಿ ಕಾಣಿಸಿಕೊಂಡಿದ್ದ ಅಮೂಲ್ಯ ಇದೀಗ ಚಿತ್ರದಿಂದ ಹೊರಬಿದ್ದಿದ್ದಾರೆ. ಕಾರಣ, ಚಿತ್ರದ ಶೂಟಿಂಗ್ 25 ದಿನ ಕಾಲ್ ಶೀಟ್ ಕೊಡಲು ಅಮೂಲ್ಯ ಬಳಿ ಸಮಯವಿಲ್ಲವಂತೆ.

ಪಾಪ ಮದುವೆ ಸಂಭ್ರಮದಲ್ಲಿರುವ ಅಮೂಲ್ಯಗೆ ಅಷ್ಟೊಂದು ಸಮಯ ಎಲ್ಲಿಂದ ಬರಬೇಕು. ಅದಕ್ಕೇ ಅಮೂಲ್ಯರನ್ನು ಕೈ ಬಿಟ್ಟು ಭಟ್ಟರು ‘ಸಿದ್ಧಾರ್ಥ’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಅಪೂರ್ವ ಅರೋರಾರನ್ನು ಕರೆತಂದಿದ್ದಾರೆ. ಮುಗುಳು ನಗೆ ಹಲವು ದಿನಗಳ ನಂತರ ಭಟ್ಟರು ಮತ್ತು ಗಣೇಶ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಚಿತ್ರ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ