ಯುವರಾಜ್ ಕುಮಾರ್-ಸಂತೋಷ್ ಆನಂದ್ ರಾಮ್ ಸಿನಿಮಾ ಅಕ್ಟೋಬರ್ ನಲ್ಲಿ ಶುರು

ಶನಿವಾರ, 11 ಜೂನ್ 2022 (08:10 IST)
ಬೆಂಗಳೂರು: ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿರುವ ದೊಡ್ಮನೆ ಮಗ ಯುವರಾಜ್ ಕುಮಾರ್ ನಾಯಕರಾಗುತ್ತಿರುವ ಸಿನಿಮಾ ಬಗ್ಗೆ ಅಪ್ ಡೇಟ್ ಒಂದು ಸಿಕ್ಕಿದೆ.

ಸಂತೋಷ್ ಆನಂದ್ ರಾಮ್ ನಿರ್ದೇಶಿಸಲಿರುವ ಈ ಸಿನಿಮಾ ಅಕ್ಟೋಬರ್ ನಲ್ಲಿ ಶುರುವಾಗಲಿದೆ ಎಂಬ ಮಾಹಿತಿಯಿದೆ. ಸದ್ಯಕ್ಕೆ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯತ್ತಿವೆ.

ಯುವರಾಜ್ ಕುಮಾರ್ ಹುಟ್ಟುಹಬ್ಬದಂದು ಈ ಸಿನಿಮಾ ಘೋಷಣೆಯಾಗಿತ್ತು. ಸಂತೋಷ್ ಆನಂದ್ ರಾಮ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಸಿನಿಮಾ ಮಾಡಬೇಕಿತ್ತು. ಆದರೆ ದುರದೃಷ್ಟವಶಾತ್ ಆಗಿರಲಿಲ್ಲ. ಹೀಗಾಗಿ ಯುವ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ