ಪುನೀತ್ ರಾಜಕುಮಾರ್ ಮನವಿಗೆ ಓಗೊಟ್ಟ ಸಿಎಂ ಯಡಿಯೂರಪ್ಪ: ‘ಯುವರತ್ನ’ಗೆ ವಿನಾಯ್ತಿ
ನಿನ್ನೆ ಸಂಜೆ ಸಿಎಂ ಜೊತೆ ಮಾತುಕತೆ ನಡೆಸಿದ ಯುವರತ್ನ ತಂಡ ರಾತ್ರಿ ವೇಳೆ ಖುಷಿಯಾಗುವ ಸುದ್ದಿಯೊಂದನ್ನು ನೀಡಿದೆ. ಇನ್ನು ಮೂರು ದಿನಗಳ ಕಾಲ ಅಂದರೆ ಏಪ್ರಿಲ್ 7 ರವರೆಗೆ ಶೇ.100 ಪ್ರೇಕ್ಷಕರಿಗೆ ಅನುಮತಿ ನೀಡಿ ಸಿಎಂ ಯಡಿಯೂರಪ್ಪ ಯುವರತ್ನ ತಂಡಕ್ಕೆ ಕಾಲಾವಕಾಶ ನೀಡಿದೆ. ಇದರಿಂದಾಗಿ ಇನ್ನು ಮೂರು ದಿನ ಥಿಯೇಟರ್ ಗಳಲ್ಲಿ ಫುಲ್ ಹಾಜರಾತಿ ಇರಬಹುದು. ಅದಾದ ಬಳಿಕ ಮತ್ತೆ ಶೇ. 50 ರ ನಿಯಮ ಪಾಲಿಸಬೇಕಾಗುತ್ತದೆ.