ಕೊನೆಗೂ ಯುವರತ್ನ ಮೂರನೇ ಹಾಡಿಗೆ ಮುಹೂರ್ತ ಕೂಡಿಬಂತು

ಬುಧವಾರ, 24 ಫೆಬ್ರವರಿ 2021 (09:25 IST)
ಬೆಂಗಳೂರು: ಯುವರತ್ನ ಸಿನಿಮಾದ ಮೂರನೇ ಹಾಡಿನ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಕಳೆದ ಭಾನುವಾರ ಬಿಡುಗಡೆಯಾಗಬೇಕಿದ್ದ ಈ ಹಾಡು ಕಾರಣಾಂತರಗಳಿಂದ ಮುಂದೂಡಿಕೆಯಾಗಿತ್ತು.


ಊರಿಗೊಬ್ಬ ರಾಜ ಎನ್ನುವ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೇ ಹಾಡಿದ್ದಾರೆ. ಈ ಹಾಡು ಫೆಬ್ರವರಿ 25 ರಂದು ಅಂದರೆ ನಾಳೆ 3.33 ಕ್ಕೆ ಹೊಂಬಾಳೆ ಫಿಲಂಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ತೆಲುಗಿನಲ್ಲೂ ಈ ಹಾಡು ಬಿಡುಗಡೆಯಾಗುತ್ತಿದೆ. ತಮನ್ ಸಂಗೀತ ಸಂಯೋಜಿಸಿರುವ ಈ ಹಾಡಿನ ಬಗ್ಗೆ ಭಾರೀ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ