ಪ್ರಿಯಾಂಕ ಉಪೇಂದ್ರ ಮಮ್ಮಿ ಪಾತ್ರವನ್ನು ತಮಿಳಿನಲ್ಲಿ ಮಾಡುವವರು ಇವರು ಮಾಡ್ತಾರೆ
ಸೋಮವಾರ, 28 ನವೆಂಬರ್ 2016 (10:01 IST)
ಬೆಂಗಳೂರು: ಪ್ರಿಯಾಂಕ ಉಪೇಂದ್ರ ಅಭಿನಯದ ಮಮ್ಮಿ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅಂದ ಹಾಗೆ ಇದು ತೆಲುಗು ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿರುವುದು ಎಲ್ಲರಿಗೂ ಗೊತ್ತು. ಈ ಸಿನಿಮಾ ಈಗ ತಮಿಳಿನಲ್ಲೂ ತಯಾರಾಗಲಿದೆಯಂತೆ. ತಮಿಳಿನಲ್ಲಿ ಪ್ರಿಯಾಂಕ ಮಾಡಿದ ಪಾತ್ರವನ್ನು ಮಾಡುವವರು ಯಾರು ಗೊತ್ತಾ?
ಜನಪ್ರಿಯ ನಟ ಸಿಂಗಂ ಸೂರ್ಯ ಪತ್ನಿ ಜ್ಯೋತಿಕಾ. ಕನ್ನಡದಲ್ಲಿ ನಿರ್ದೇಶಿಸಿದ ಲೋಹಿತ್ ಅವರೇ ತಮಿಳಿನಲ್ಲಿ ಜ್ಯೋತಿಕಾಗೆ ಆಕ್ಷನ್ ಕಟ್ ಹೇಳಲಿದ್ದಾರಂತೆ. ಟ್ರೇಲರ್ ನೋಡಿ ಖುಷಿಯಾಗಿದ್ದ ಸೂರ್ಯ ಮತ್ತು ಜ್ಯೋತಿಕಾ ಸಿನಿಮಾ ನೋಡಲು ಬಯಸಿದ್ದರಂತೆ.
ಹಾಗೆ ಸಿನಿಮಾ ತೋರಿಸಿದ ನಿರ್ದೇಶಕರ ಬಳಿ ಜ್ಯೋತಿಕಾ ಇದೇ ಚಿತ್ರವನ್ನು ತಮಿಳಿನಲ್ಲೂ ಮಾಡಿ ಅಂದರಂತೆ. ಹಾಗಾಗಿ ಜ್ಯೋತಿಕಾ ಅವರನ್ನೇ ಹಾಕಿಕೊಂಡು ಸಿನಿಮಾ ಮಾಡಲು ನಿರ್ಧರಿಸಿದರಂತೆ ಲೋಹಿತ್. ಕನ್ನಡ ಚಿತ್ರದ ಬಗ್ಗೆ ಈ ಬಗೆಯ ಹೈಪ್ ಕ್ರಿಯೇಟ್ ಆಗುವುದು ಖುಷಿಯ ವಿಚಾರವೇ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ